ಕೊಡಗಿನಲ್ಲಿ ಕೋವಿ ಹಬ್ಬ: ಗತ್ತು, ಗಾಂಭೀರ್ಯ ಸಾರುವ ಈ ಹಬ್ಬದ ವಿಶೇಷತೆ ಏನು?

ಕೊಡಗಿನಲ್ಲಿ ಕೋವಿಗೆ ಪ್ರಮುಖ ಸ್ಥಾನವಿದೆ. ಕೊಡವರ ಜೀವನದಲ್ಲಿ ಕೋವಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ತಮ್ಮ ಜೀವನದ ಭಾಗವಾಗಿರುವ ಕೋವಿಗೂ ಕೊಡವರು ಕೋವಿ ಹಬ್ಬ ಆಚರಿಸುತ್ತಾರೆ. ಡಿಸೆಂಬರ್ 18 ರಂದು ಕೊಡವರು ಕೋವಿ ಹಬ್ಬ ಆಚರಿಸಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್‌ ವಿಭಿನ್ನವಾಗಿ ಆಚರಿಸುತ್ತಾ ಬಂದಿರುವ ಕೋವಿ ಹಬ್ಬದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯುತ್ತದೆ.

Share this Video
  • FB
  • Linkdin
  • Whatsapp

ಕೊಡಗಿನಲ್ಲಿ ಕೋವಿಗೆ ಪ್ರಮುಖ ಸ್ಥಾನವಿದೆ. ಕೊಡವರ ಜೀವನದಲ್ಲಿ ಕೋವಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ತಮ್ಮ ಜೀವನದ ಭಾಗವಾಗಿರುವ ಕೋವಿಗೂ ಕೊಡವರು ಕೋವಿ ಹಬ್ಬ ಆಚರಿಸುತ್ತಾರೆ. ಡಿಸೆಂಬರ್ 18 ರಂದು ಕೊಡವರು ಕೋವಿ ಹಬ್ಬ ಆಚರಿಸಿದ್ದಾರೆ. ಕೊಡವ ನ್ಯಾಷನಲ್ ಕೌನ್ಸಿಲ್‌ ವಿಭಿನ್ನವಾಗಿ ಆಚರಿಸುತ್ತಾ ಬಂದಿರುವ ಕೋವಿ ಹಬ್ಬದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯುತ್ತದೆ.

ಡಿಸೆಂಬರ್ 18 ಅಲ್ಪ ಸಂಖ್ಯಾತ ಹಕ್ಕುಗಳ ದಿನಾಚರಣೆ ಕೂಡಾ. ಇದೇ ದಿನವನ್ನು ಕೊಡವ ನ್ಯಾಷನಲ್ ಸಂಘಟನೆ ಕೋವಿ ಉತ್ಸವದ ರೂಪದಲ್ಲಿ ವಿಭಿನ್ನವಾಗಿ ಆಚರಿಸುತ್ತಿದೆ. ಕೋವಿ ಅಂದ್ರೆ ಗತ್ತು, ಗಾಂಭೀರ್ಯ ಮಾತ್ರವಲ್ಲ, ಕೊಡವರ ಜೀವನದ ಭಾಗ. ಅದಕ್ಕೂ ಪೂಜ್ಯನೀಯ ಸ್ಥಾನವಿದೆ ಅನ್ನೋದನ್ನ ಸಾರುವುದು ಈ ಹಬ್ಬದ ವಿಶೇಷತೆಯಾಗಿದೆ.

Related Video