ಕುಡಿದ ಮತ್ತಿನಲ್ಲಿ ಕಾರು ಅಪಘಾತ, ಕುಶಾಲನಗರದಲ್ಲಿ ನಿಂತಿದ್ದ ಆಟೋಗೆ ಡಿಕ್ಕಿ

ಕುಡಿದ ಮತ್ತಿನ ಕಾರು ಚಲಾಯಿಸಿದ ಭೀಕರ ಅಪಾಘಾತಕ್ಕೆ ಕಾರಣವಾದ ಘಟನೆ ಕೊಡಗಿನ ಕುಶಾಲನಗರದಲ್ಲಿ ನಡೆದಿದೆ. ನಿಂತಿದ್ದ ಆಟೋಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

First Published Jan 11, 2025, 1:03 PM IST | Last Updated Jan 11, 2025, 1:06 PM IST

ಕುಶಾಲನಗರ(ಜ.11) ಕುಡಿದು ಕಾರು ಚಲಾಸಿದ ಭೂಪ ಕೊಡಗಿನ ಕುಶಾಲನಗರದಲ್ಲಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದಿದ್ದಾನೆ.ಮದ್ ಸೇವನೆ ಮಾಡಿ ಅತೀ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ನಿಂತಿದ್ದ ಆಟೋಗೆ ಕಾರು ಡಿಕ್ಕಿಯಾಗಿದೆ. ಆಟೋ ಚಾಲಕ ಗಾಯಗೊಂಡಿದ್ದಾನೆ. ಇಷ್ಟೇ ಅಲ್ಲ ಒರ್ವ ಬಾಲಕಿ ಗಾಯಗೊಂಡಿದ್ದಾಳೆ. ಇನ್ನಿಬ್ಬರು ಮಹಿಳೆಯರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.