ಅಣ್ಣನೇ ತಮ್ಮನನ್ನ ಕೊಂದಿದ್ದೇಕೆ? ಅನ್ನೋ ಪ್ರಶ್ನೆ ಬಂದಾಗ ಅಲ್ಲಿ ಬಂದಿದ್ದು ಒಂದು ಸಿಲ್ಲಿ ಮ್ಯಾಟರ್!

ಮಡಿಕೇರಿ ತಾಲ್ಲೂಕಿನ ಅತ್ಯಂತ ದಟ್ಟಾರಣ್ಯದಿಂದ ಸುತ್ತುವರಿದಿರುವ ಒಣಚಲು ಗ್ರಾಮದ ಕುಟುಂಬದ ಸಹೋದರರು ಕಣ್ರಿ ಇವರು. ತಂದೆ ತಾಯಿಯೂ ಇಲ್ಲದ, ಇತ್ತ ಹಿರಿಯ ಅಣ್ಣನೂ ಇಲ್ಲದೆ ಕಳೆದ 20 ವರ್ಷಗಳಿಂದ ಅತ್ತಿಗೆಯೊಂದಿಗೆ ಒಂದೇ ಮನೆಯಲ್ಲಿ ಬದುಕುತ್ತಿದ್ದವರು. 

First Published Dec 21, 2024, 4:54 PM IST | Last Updated Dec 21, 2024, 4:54 PM IST

ಅವರಿಬ್ಬರೂ ಅಣ್ಣ-ತಮ್ಮಂದಿರು. ಗಂಡನಿಲ್ಲದ ಅತ್ತಿಗೆ ಮನೆಯಲ್ಲೇ ತಿಂದುಂಡು ಒಂದೇ ಮನೆಯಲ್ಲಿ ಬದುಕುತ್ತಿದ್ದವರು. ಆದರೆ ಆವತ್ತು ಬೆಳ್ಳಂಬೆಳಿಗ್ಗೆ ಸಹೋದರರ ನಡುವೆ ಗಲಾಟೆಯಾಗಿತ್ತು. ಈ ಗಲಾಟೆ ತಮ್ಮನ ಎದೆಗೆ ಗುಂಡಿಟ್ಟು ಕೊಲ್ಲುವವರೆಗೆ ತಲುಪಿತ್ತು. ಅಷ್ಟಕ್ಕೂ ಒಂದೇ ಮನೆಯಲ್ಲಿ ಇದ್ದ ಸಹೋದರರ ನಡುವೆ ಆಗಿದ್ದಾದರೂ ಏನು? ಅಣ್ಣನೇ ತಮ್ಮನನ್ನ ಕೊಂದಿದ್ದೇಕೆ? ಅನ್ನೋ ಪ್ರಶ್ನೆ ಬಂದಾಗ ಅಲ್ಲಿ ಬಂದಿದ್ದು ಒಂದು ಸಿಲ್ಲಿ ಮ್ಯಾಟರ್​​