ಪ್ರೇಯಸಿ ಎಂದು ವಿದ್ಯಾರ್ಥಿನಿಗೆ ಹಲ್ಲೆ: ಪೋಲಿಗೆ ಬಿತ್ತು ಗೂಸಾ

ವಿದ್ಯಾರ್ಥಿನಿಗೆ ಹಲ್ಲೆ ಮಾಡ್ತಿದ್ದ ಯುವಕನಿಗೆ ಗೂಸಾ ಬಿದ್ದಿದ್ದು, ಪೋಲಿ ಯುವಕನಿಗೆ ಸ್ಥಳೀಯರು ತಕ್ಕಪಾಠ ಕಲಿಸಿದ್ದಾರೆ.

First Published Jan 15, 2023, 2:29 PM IST | Last Updated Jan 15, 2023, 2:29 PM IST

ಗದಗ ಜಿಲ್ಲೆಯ ಕಳಸಾಪುರ ರಸ್ತೆಯ ಬಾಲಕಿಯರ ಹಾಸ್ಟೆಲ್‌ ಬಳಿ, ಪ್ರೇಯಸಿ ಎಂದು ಹೇಳಿಕೊಂಡು ವಿದ್ಯಾರ್ಥಿನಿಗೆ ಹಲ್ಲೆ ನಡೆಸುತ್ತಿದ್ದ ಯುವಕನಿಗೆ ಕಪಾಳಮೋಕ್ಷ ಮಾಡಿ ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಜೇಂದ್ರಗಡ ಮೂಲದ ಶ್ರೀನಿವಾಸ ಎಂಬಾತ ಆಗಾಗ ಬಾಲಕಿಯರ ಹಾಸ್ಟೆಲ್‌ ಬಳಿ ಬರುತ್ತಿದ್ದ. ನಿನ್ನೆ ಏಕಾಏಕಿ ಯುವತಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ವಿಚಾರಿಸಿದ್ದಾಗ ಆಕೆಯನ್ನು ಮದುವೆಯಾಗಿದ್ದೇನೆ ಎಂದು ಸಮರ್ಥನೆ ನೀಡಿದ್ದಾನೆ. ವಿಚಾರಿಸಿದಾಗ ಇಬ್ಬರು ಪ್ರೇಮಿಗಳು ಎಂದು ಗೊತ್ತಾಗಿದೆ.

ಪ್ರಕೃತಿಯ ಮೇಲೆ ಸಿದ್ದೇಶ್ವರ ಶ್ರೀಗಳಿಗೆ ವಿಶೇಷ ಪ್ರೀತಿ: 'ಆಲದ ಮರ'ವೇ ...