ಪ್ರಕೃತಿಯ ಮೇಲೆ ಸಿದ್ದೇಶ್ವರ ಶ್ರೀಗಳಿಗೆ ವಿಶೇಷ ಪ್ರೀತಿ: 'ಆಲದ ಮರ'ವೇ ಜೀವಂತ ಸಾಕ್ಷಿ
ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಸಿದ್ದೇಶ್ವರ ಶ್ರೀಗಳು, ಗಿಡ-ಮರಗಳನ್ನು ಕೂಡ ಮನುಷ್ಯರಂತೆ ಪ್ರೀತಿ ಮಾಡುತ್ತಿದ್ದರು.
ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರಕೃತಿಯ ಮೇಲೆ ವಿಶೇಷ ಕಾಳಜಿ ಹೊಂದಿದ್ದರು. ಆಶ್ರಮದಲ್ಲಿ ಆಲದ ಮರವೊಂದು ದೊಡ್ಡದಾಗಿ ಬೆಳೆದಿದ್ದು ಕೊಂಬೆಗಳು ಬೀಳುವಂತ ಸ್ಥಿತಿಯಲ್ಲಿ ಇದೆ. ಬೇರೆ ಎಲ್ಲಾದ್ರೂ ಆಗಿದ್ದರೆ ಈ ಮರವನ್ನು ಇಷ್ಟರಲ್ಲಿ ಕತ್ತರಿಸಲಾಗುತ್ತಿತ್ತು ಆದರೆ ಇಲ್ಲಿ ಗುರುಗಳಿಂದ ಆಜ್ಞೆಯಾಗಿದೆ. ಯಾವುದೇ ರೆಂಬೆ ಕೊಂಬೆಗಳನ್ನು ಕತ್ತರಿಸಬಾರದೆಂದು ಶ್ರೀಗಳು ಪ್ರವಚನ ಹೇಳುವ ಜಾಗದಲ್ಲಿ ಇಷ್ಟೊಂದು ಕೊಂಬೆಗಳು ಉದ್ದವಾಗಿ ಬಂದಿದ್ದರೂ ಕೂಡ, ಅವುಗಳನ್ನು ಕಡಿಯಲು ಯಾವತ್ತು ಆದೇಶವನ್ನು ಮಾಡಿಲ್ಲ. ಭಕ್ತರು ಕೂಡಾ ಕಡಿದು ಹಾಕಿಲ್ಲ. ಕೊಂಬೆಗಳಿಗೆ ಸಪೋರ್ಟಿವ್ ಆಗಿ ಕಂಬಗಳನ್ನು ಇಟ್ಟು ರಕ್ಷಣೆ ಮಾಡತಕ್ಕಂತ ಕೆಲಸವನ್ನು ಇಲ್ಲಿ ಮಾಡಲಾಗಿದೆ. ಶ್ರಿಗಳಿಗೆ ಮರದ ಮೇಲೆ ಗಿಡದ ಮೇಲೆ, ಪ್ರಕೃತಿಯ ಮೇಲೆ ಇದ್ದ ಪ್ರೀತಿಗೆ ಇದು ಸಾಕ್ಷಿ ಆಗಿದೆ.
ಸ್ಯಾಂಟ್ರೋ ರವಿಗೆ ಸಾಥ್ ನೀಡಿದ್ದ ಚೇತನ್ ಅರೆಸ್ಟ್: ಪೊಲೀಸರ ಕಾರ್ಯಾಚರಣೆ ಹೇಗಿತ್ತು ಗೊತ್ತಾ?