Asianet Suvarna News Asianet Suvarna News

Yakshagana: ಕಲಾವಿದರಿಗೆ ಕರ್ಫ್ಯೂ ಬಿಸಿ, ಕಾಲಮಿತಿಯೊಳಗೆ ಅವಕಾಶ ಕೊಡುವಂತೆ ಮನವಿ

 ವೀಕೆಂಡ್ ಕರ್ಫ್ಯೂ (Weekend Curfew) ನೈಟ್ ಕರ್ಫ್ಯೂನಿಂದಾಗಿ (Night Curfew) ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಭಾಗದ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕೊರೊನಾ 2 ನೇ ಅಲೆ ಬಳಿಕ ಸೋಂಕು ತಗ್ಗಿ, ಎಲ್ಲವೂ ಸಹಜ ಸ್ಥಿತಿಯತ್ತ ಬರುತ್ತಿತ್ತು. 

ಉಡುಪಿ (ಜ. 14): ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಭಾಗದ ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಕೊರೊನಾ 2 ನೇ ಅಲೆ ಬಳಿಕ ಸೋಂಕು ತಗ್ಗಿ, ಎಲ್ಲವೂ ಸಹಜ ಸ್ಥಿತಿಯತ್ತ ಬರುತ್ತಿತ್ತು.

ಯಕ್ಷಗಾನ ಕಲಾವಿದರೂ ತಿರುಗಾಟ ಆರಂಭಿಸಿದ್ದರು. ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗ ಒಮಿಕ್ರೋನ್, ಕೋವಿಡ್ 3 ನೇ ಅಲೆಯಿಂದ ಮತ್ತೆ ಭೀತಿ ಶುರುವಾಗಿದೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿರ್ಬಂಧ, ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿದೆ. ಇದರಿಂದ ಯಕ್ಷಗಾನ ಕಲಾವಿದರು ಮತ್ತೆ ಸಂಕಷ್ಟದಲ್ಲಿದ್ದಾರೆ. ನಿಯಮ ಪಾಲಿಸಿ ಕಾಲಮಿತಿಯೊಳಗೆ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಕಲಾವಿದರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ಧಾರೆ. 

Video Top Stories