ಯಾದಗಿರಿ ಜಿಲ್ಲಾಡಳಿತದಿಂದ ಮಹಾ ಯಡವಟ್ಟು: ರಿಪೋರ್ಟ್ ಬರೋ ಮುನ್ನ ಕೊರೋನಾ ಶಂಕಿತರು ರಿಲೀಸ್..!
ಕೊರೋನಾ ವರದಿ ಬರುವ ಮುನ್ನವೇ ಶಂಕಿತರು ಬಿಡುಗಡೆ| ಯಡವಟ್ಟು ಮಾಡಿಕೊಂಡ ಯಾದಗಿರಿ ಜಿಲ್ಲಾಡಳಿತ|ಕ್ವಾರಂಟೈನ್ ಕೇಂದ್ರದಲ್ಲಿದ್ದ 45 ಜನರ ಪೈಕಿ 18 ಜನರು ರಿಲೀಸ್| ಎಲ್ಲ 45 ಜನರಿಗೂ ಕೊರೋನಾ ಶಂಕೆ|
ಯಾದಗಿರಿ(ಮೇ.31): ಮಹಾಮಾರಿ ಕೊರೋನಾ ವರದಿ ಬರುವ ಮುನ್ನವೇ ಶಂಕಿತರನ್ನ ಕ್ವಾರಂಟೈನ್ ಕೇಂದ್ರದಿಂದ ಯಾದಗಿರಿ ಜಿಲ್ಲಾಡಳಿತ ಬಿಡುಗಡೆ ಮಾಡುವ ಮೂಲಕ ಯಡವಟ್ಟು ಮಾಡಿಕೊಂಡ ಘಟನೆ ನಡೆದಿದೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ 45 ಜನರ ಪೈಕಿ 18 ಜನರನ್ನ ರಿಲೀಸ್ ಮಾಡಿದೆ.
ಮುಂಗಾರು ಪ್ರಾರಂಭದಲ್ಲಿ ಉತ್ತಮ ಬೀಜ ವಿತರಿಸಿ: ಕೃಷಿ ಸಚಿವ B C ಪಾಟೀಲ
ಎಲ್ಲ 45 ಜನರಿಗೂ ಕೊರೋನಾ ಶಂಕೆ ವ್ಯಕ್ತವಾಗಿದೆ. ಆದರೆ, ಜಿಲ್ಲಾಡಳಿತ ಹಿಂದು ಮುಂದು ಯೋಚನೆ ಮಾಡದೆ 18 ಮಂದಿಯನ್ನ ರಿಲೀಸ್ ಮಾಡಿದೆ. ಕ್ವಾರಂಟೈನ್ ಕೇಂದ್ರದಲ್ಲಿರಬೇಕಾಗಿದ್ದ ಜನರೆಲ್ಲಾ ಇದೀಗ ಊರಿನ ತುಂಬೆಲ್ಲಾ ಓಡಾಡುತ್ತಿದ್ದಾರೆ.