ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವು : ಅನಾಥನಾದ ಮಗ

  • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಪತಿ ನಿಧನ - ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು
  • ಚಿಕಿತ್ಸೆ ಫಲಿಸದೇ ಮೃತಪಟ್ಟ ವ್ಯಕ್ತಿ
  • ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲಿ ದುರ್ಘಟನೆ
First Published May 12, 2021, 12:04 PM IST | Last Updated May 12, 2021, 12:04 PM IST

ಚಿಕ್ಕಮಗಳೂರು (ಮೇ.12): ಕೊರೋನಾ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿನವೂ ಏರಿಕೆಯಾಗುತ್ತಲೇ ಇದೆ. ರಾಜ್ಯದಲ್ಲಿ ಸೋಂಕು ಏರುಗತಿಯಲ್ಲೇ ಸಾಗುತ್ತಿದೆ. ಇದರ ನಡುವೆ ಹಲವು ಕಣ್ಣೀರಿನ  ಸಂಗತಿಗಳು ದಿನದಿನವೂ ವರದಿಯಾಗುತ್ತಲಿವೆ. 

ತಂದೆ - ತಾಯಿ ಬಲಿ ಪಡೆದ ಕೊರೋನಾ : ಅನಾಥವಾದ ಪುಟ್ಟ ಮಗು ..

ಚಿಕ್ಕಮಗಳೂರಿನ ಕೋಟೆ ಬಡಾವಣೆಯಲ್ಲೊಂದು ದುರ್ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಪತಿ ಮೃತಪಟ್ಟಿದ್ದು, ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಮೃತಪಟ್ಟಿದ್ದಾರೆ.  ಹೃದಯಾಘಾತದಿಂದ ಪತ್ನಿ ಮೃತಪಟ್ಟಿದ್ದಾರೆ. ತಂದೆ ತಾಯಿ ಕಳೆದುಕೊಂಡು ಮಗ ಅನಾಥನಾಗಿದ್ದಾನೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona