Asianet Suvarna News Asianet Suvarna News

ಹುಬ್ಬಳ್ಳಿ ಗಲಭೆಗೆ ಪ್ರೇರಣೆ ಕೊಟ್ಟವರಾರು ಗೊತ್ತಾ? ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್‌ ಸ್ಟೋರಿ

*ಹುಬ್ಬಳ್ಳಿ ಗಲಭೆ ರೂವಾರಿ ವಸೀಂ ಪಠಾಣ್‌ ಬಂಧನ
*ಗಲಭೆ ಹಿಂದೆ ರಜಾ ಅಕಾಡೆಮಿ ಸದಸ್ಯರ ಕೈವಾಡ?
*ಬಂಧಿತರೆಲ್ಲರೂ ಈ ಸಂಘಟನೆಯ ಸದಸ್ಯರು 

ಬೆಂಗಳೂರು (ಏ. 22): ಹುಬ್ಬಳ್ಳಿಯಲ್ಲಿ ಕಳೆದ ಶನಿವಾರ ತಡರಾತ್ರಿ ನಡೆದ ಗಲಭೆಯ ‘ಮಾಸ್ಟರ್‌ ಮೈಂಡ್‌’ ಎಂದೇ ಹೇಳಲಾದ, ಮಸೀದಿಯಲ್ಲಿ ಆಜಾನ್‌ ಕೂಗುವ ವಸೀಂ ಪಠಾಣ್‌, ಆತನ ಮೂವರು ಸಹ​ಚ​ರರು ಸೇರಿ ಒಟ್ಟು ಎಂಟು ಮಂದಿ​ಯನ್ನು ಪೊಲೀಸರು ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಹುಬ್ಬಳ್ಳಿ ಗಲಭೆ ಹಿಂದೆ ರಜಾ ಅಕಾಡೆಮಿ ಸದಸ್ಯರ ಕೈವಾಡವಿರುವ ಶಂಕೆ ಈಗ ವ್ಯಕ್ತವಾಗಿದೆ. ರಜಾ ಅಕಾಡೆಮೆ ಕಟ್ಟರ್‌ ಮುಸ್ಲಿಂ ವಾದಿಗಳ ಸಂಘಟನೆಯಾಗಿದ್ದು, ಅರೆಸ್ಟ್‌ ಆಗಿರುವ ವಸೀಂ, ಮುಲ್ಲಾ, ಮಲ್ಲೀಕ್‌ ಬೇಪಾರಿ ಈ ಸಂಘಟನೆಯ ಸದಸ್ಯರಾಗಿದ್ದಾರೆ. 

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಮಸೀದಿಯಲ್ಲಿ ಆಜಾನ್ ಕೂಗುವ ವಸೀಂ ಬಂಧನ!

ಹೀಗಾಗಿ ಹುಬ್ಬಳ್ಳಿ ಗಲಭೆ ಪೂರ್ವನಿಯೋಜಿತ ಕೃತ್ಯ ಎಂಬ ಸಂಗತಿ ಈಗ ಬಯಲಾಗ್ತಾಯಿದೆ. ಅಭಿಷೇಕ್‌ ಹಿರೇಮಠ ಎಂಬ ಯುವ​ಕ​ನೊಬ್ಬ ಮುಸ್ಲಿಂ ಸಮುದಾಯದ ವಿರುದ್ಧ ಅವ​ಹೇ​ಳ​ನ​ಕಾರಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ವೊಂದ​ನ್ನು ಹಾಕಿದ್ದು, ಈ ಸಂಬಂಧ ಆತ​ನನ್ನು ಪೊಲೀ​ಸರು ಬಂಧಿ​ಸಿ​ದ್ದರು. ಆದರೆ, ಆರೋಪಿಯನ್ನು ತಮ​ಗೊಪ್ಪಿಸುವಂತೆ ಮುಸ್ಲಿಂ ಸಮುದಾಯದವರು ಶನಿ​ವಾರ ರಾತ್ರಿ ಠಾಣೆಗೆ ಘೇರಾವ್‌ ಹಾಕಿ ಪ್ರತಿಭಟನೆ ನಡೆಸಿದ್ದರು. 

Video Top Stories