ಕೋರ್ಟ್‌ ಆದೇಶಕ್ಕೂ ಡೋಂಟ್‌ ಕೇರ್‌: 'ಹಿಜಾಬ್‌, ಬುರ್ಕಾ ಧರಿಸಿಯೇ ಕ್ಲಾಸ್‌ನಲ್ಲಿ ಕೂರ್ತಿವಿ'

*  ಪ್ರಿನ್ಸಿಪಾಲ್‌ ಜತೆ ವಾಗ್ವಾದಕ್ಕಿಳಿದ ವಿದ್ಯಾರ್ಥಿನಿಯರು
*  ಕೋರ್ಟ್‌ ಆದೇಶಕ್ಕೂ ಕೇರ್‌ ಮಾಡದ ವಿದ್ಯಾರ್ಥಿನಿಯರು
*  ವಿಜಯಪುರ ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದ ಘಟನೆ
 

First Published Feb 16, 2022, 12:30 PM IST | Last Updated Feb 16, 2022, 12:55 PM IST

ವಿಜಯಪುರ(ಫೆ.16): ವಿಜಯಪುರದಲ್ಲಿ ಹಿಜಾಬ್‌ ಕಿಚ್ಚು ಗಲಾಟೆಯ ಜೋರಾಗಿದೆ. ಹೌದು, ಹಿಜಾಬ್‌, ಬುರ್ಕಾ ಧರಿಸಿಯೇ ನಾವು ಕ್ಲಾಸ್‌ನಲ್ಲಿ ಕುಳಿತುಕೊಳ್ಳುತ್ತೇವೆ ಅಂತ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಕೋರ್ಟ್‌ ಆದೇಶಕ್ಕೂ ವಿದ್ಯಾರ್ಥಿನಿಯರು ಕೇರ್‌ ಮಾಡುತ್ತಿಲ್ಲ. ಈ ಸಂಬಂಧ ಪ್ರಿನ್ಸಿಪಾಲ್‌ ಜತೆ ವಿದ್ಯಾರ್ಥಿನಿಯರು ವಾಗ್ವಾದಕ್ಕಿಳಿದಿದ್ದಾರೆ. ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಘಟನೆ ನಡೆದಿದೆ. ರಾಜ್ಯಾದ್ಯಂತ ಪಿಯು, ಡಿಗ್ರಿ ಕಾಲೇಜುಗಳು ಆರಂಭವಾಗಿವೆ. ಹಿಜಾಬ್‌ ಸಂಘರ್ಷದಿಂದ ಕಾಲೇಜುಗಳು ಬಂದ್‌ ಆಗಿದ್ದವು. ಇದೀಗ ಮತ್ತೆ ಕಾಲೇಜು ಆರಂಭವಾಗುತ್ತಿದ್ದಂತೆ ಹಿಜಾಬ್‌ ಸಂಘರ್ಷ ಮತ್ತು ಜೋರಾಗಿದೆ. ಯಾವುದೇ ಕಾರಣಕ್ಕೂ ನಾವು ಹಿಜಾಬ್‌ ತೆಗೆಯೋದಿಲ್ಲ ಅಂತ ವಿದ್ಯಾರ್ಥಿನಿರು ಪಟ್ಟು ಹಿಡಿದಿದ್ದಾರೆ. ನಾವು ಹಿಜಾಬ್‌, ಬುರ್ಕಾ ಧರಿಸಿಯೇ ತರಗತಿಗೆ ಹಾರಜ್‌ ಆಗುತ್ತೇವೆ ಅಂತ ಪ್ರಿನ್ಸಿಪಾಲ್‌ ಜತೆ ವಾಗ್ವಾದಕ್ಕಿಳಿದಿದ್ದಾರೆ. 

Chikkamagalur: ಬದುಕಿದ್ದಾಗ ಆರೋಗ್ಯಸೇವೆ, ಹೋದಾಗ ಜೀವದಾನ- ನರ್ಸ್‌ ಒಬ್ಬಳ ಸಾರ್ಥಕ್ಯ ಜೀವನ