'ಪ್ರಜಾಧ್ವನಿ' ಯಾತ್ರೆಗೂ ಮುನ್ನ 'ಕೈ' ನಾಯಕರ ನಡುವೆ 'ಏರುಧ್ವನಿ': ಬ್ಯಾನರ್ ಹಾಕೋ ವಿಚಾರದಲ್ಲಿ ಬೀದಿ ರಂಪಾಟ

ಚುನಾವಣೆಗೆ ಇನ್ನೇನು ಕೆಲ ತಿಂಗಳು ಬಾಕಿ ಇರೋವಾಗಲೇ ಕಾಂಗ್ರೆಸ್ ನಾಯಕರ ಕಿತ್ತಾಟ ಶುರುವಾಗಿದ್ದು, ಹೊಸಪೇಟೆ ನಗರ ಕ್ಷೇತ್ರದ ಆಕಾಂಕ್ಷಿಗಳು ಬೀದಿ ರಂಪಾಟ ಮಾಡಿಕೊಂಡಿದ್ದಾರೆ.

First Published Jan 16, 2023, 12:38 PM IST | Last Updated Jan 16, 2023, 12:38 PM IST

ನಾಳೆ ಹೊಸಪೇಟೆಯಲ್ಲಿ ಪ್ರಜಾಧ್ವನಿಯಾತ್ರೆ ಹಿನ್ನೆಲೆ  ಅದ್ದೂರಿ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ಬ್ಯಾನರ್ ಹಾಕೋ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸೋ ಹಂತಕ್ಕೆ ಬಂದು ತಲುಪಿದೆ. ಕಾಂಗ್ರೆಸ್ ನಾಯಕರಾದ ರಾಜಶೇಖರ್ ಹಿಟ್ನಾಳ್, ಮಾಜಿ ಶಾಸಕರಾದ ಗವಿಯಪ್ಪ ಮತ್ತು ಸಿರಾಜ್ ಶೇಕ್, ಸೇರಿದಂತೆ ಅನೇಕ ನಾಯಕರು ಬ್ಯಾನರ್ ಹಾಕಿಸಿದ್ದಾರೆ. ಒಬ್ಬರು ಹಾಕಿಸಿರೋ ಬ್ಯಾನರ್ ಮತ್ತೊಬ್ರು ಕಿತ್ತುವ ಮೂಲಕ ತಮ್ಮ ಬ್ಯಾನರ್ ಹೈಲೈಟ್ ಆಗುವಂತೆ ಮಾಡ್ತಿದ್ದಾರೆ . ನಾಯಕರುಗಳ ಬೆಂಬಲಿಗರಿಂದ ತಡರಾತ್ರಿವರೆಗೂ ಬೀದಿ ರಂಪಾಟ ನಡೆದಿದೆ. ಇನ್ನು ಗಲಾಟೆ ಜೋರಾಗ್ತಿದ್ದಂತೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆಗಮಿಸಿ, ಯಾರ ಫೋಟೋಸ್ ಬೇಡ, ಕೇವಲ ರಾಷ್ಟ್ರೀಯ, ರಾಜ್ಯ ನಾಯಕರ ಫೋಟೋಸ್ ಹಾಕಿ ಅಂತ ತಾಕೀತು ಮಾಡಿ ಗಲಾಟೆ ಶಾಂತ ಪಡಿಸಿದ್ದಾರೆ.