Mangaluru; ಹಿಂದುತ್ವದ ಮತಗಳು  ಬೇಕೋ, ಬೇಡ್ವೋ? ಬೊಮ್ಮಾಯಿಗೆ VHP ಪ್ರಶ್ನೆ

* ನಾಗದೇವರ ಕಲ್ಲಿಗೆ ಹಾನಿಗೈದ ದುಷ್ಕರ್ಮಿಗಳ ಬಂಧನವಾಗದ ಹಿನ್ನೆಲೆ

* ಮಂಗಳೂರಿನ ಕೋಡಿಕಲ್  ಬಂದ್ ಮಾಡಿದ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ

* ಪೊಲೀಸ್ ಇಲಾಖೆಗೆ ನೀಡಿದ ಗಡುವು ಮುಗಿದ ಹಿನ್ನೆಲೆ ಕೋಡಿಕಲ್ ಬಂದ್

* ಕೋಡಿಕಲ್ ಬಳಿಯ ನಾಗದೇವದ ಕಟ್ಟೆಯ ನಾಗ ದೇವರ ಕಲ್ಲ‌ನ್ನು ಕಿತ್ತು ಎಸೆದಿದ್ದ ಕಿಡಿಗೇಡಿಗಳು

First Published Nov 15, 2021, 5:16 PM IST | Last Updated Nov 15, 2021, 5:16 PM IST

ಮಂಗಳೂರು(ನ. 15) ನಾಗದೇವರ ಕಲ್ಲಿಗೆ ಹಾನಿಗೈದ ದುಷ್ಕರ್ಮಿಗಳನ್ನು  ಇನ್ನೂ ಬಂಧಿಸದೆ ಇರುವುದಕ್ಕೆ  ಮಂಗಳೂರಿನ (Mangaluru) ಕೋಡಿಕಲ್ ಬಂದ್ ಮಾಡಿ ವಿಶ್ವಹಿಂದು ಪರಿಷತ್(VHP)  ಮತ್ತು ಬಜರಂಗದಳ (Bajrang Dal) ಆಕ್ರೋಶ ಹೊರಹಾಕಿದೆ.

ಮಂಗಳೂರಿನ ಕೋಡಿಕಲ್ ಬಳಿಯ ನಾಗದೇವದ ಕಟ್ಟೆಯಲ್ಲಿ ಶನಿವಾರ ಕಿಡಿಗೇಡಿಗಳು  ನಾಗ ದೇವರ ಕಲ್ಲ‌ನ್ನು ಕಿತ್ತು ಎಸೆದಿದ್ದರು.  ಇದರ ಪರಿಣಾಮ ಕೋಡಿಕಲ್ ನಲ್ಲಿ ಬಸ್ ಸಂಚಾರ, ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ (Bandh) ಮಾಡಿ ಆಕ್ರೋಶ ಹೊರಹಾಕಲಾಯಿತು.

2023ರ ಅಂತ್ಯಕ್ಕೆ ರಾಮ​ಮಂದಿ​ರ ಗರ್ಭಗುಡಿ ಸಿದ್ಧ, ಅಲ್ಲೇ ಪೂಜೆ: ವಿಎ​ಚ್‌​ಪಿ!

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್, ರಾಜ್ಯದ ಮುಖ್ಯಮಂತ್ರಿಗಳು ಒಮ್ಮೆ ಕರಾವಳಿ ಭಾಗಕ್ಕೆ ಗಮನ ಕೊಡಿ, ಕರಾವಳಿ ಎನ್ನುವುದು ಹಿಂದುತ್ವದ ಭದ್ರಕೋಟೆ. ಇಲ್ಲಿನವರು ದುಡ್ಡು ಅಥವಾ ಇನ್ಯಾವುದಕ್ಕೋ ಕೈ ಚಾಚಿ ಓಟು ಹಾಕಲ್ಲ. ಕರಾವಳಿ ಜನತೆ ಹಿಂದುತ್ವಕ್ಕೊಸ್ಕರ ಇವತ್ತಿನ ತನಕ ಓಟ್ ಹಾಕಿದ್ದಾರೆ ಅನ್ನೋದನ್ನ ನೆನಪಿಟ್ಟುಕೊಳ್ಳಿ. ಹಿಂದುತ್ವದ ಭದ್ರಕೋಟೆ ಮತ್ತು ಹಿಂದುತ್ವದ ಓಟ್ ನಿಮಗೆ ಉಳಿಸಬೇಕಾ? ಎಂದು ಸಿಎಂಗೆ ಸವಾಲು ಹಾಕಿದ್ದಾರೆ.

ಒಮ್ಮೆ ಮಂಗಳೂರಿಗೆ ಬಂದು ಇಲ್ಲಿನ ನಾಗಸ್ಥಾನ, ದೈವಸ್ಥಾನ ಭೇಟಿ ಕೊಡಿ, ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಿ. ಮಂಗಳೂರು ಕಮಿಷನರ್ ಅವರಲ್ಲಿ ನನ್ನ ಒಂದು ಆಗ್ರಹವಿದೆ. ಹಿಂದೂ ಶ್ರದ್ದಾ ಕೇಂದ್ರಗಳ ಮೇಲಿ ದಾಳಿ ನಡೆಸೋರನ್ನ ಎನ್ ಕೌಂಟರ್ ‌ಮಾಡಿ ಮುಗಿಸಿ. ಕಳೆದ ಹತ್ತಾರು ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಹಿಂದುತ್ವದ ಮೇಲೆ ದಾಳಿ ‌ಮಾಡ್ತಿದೆ. ಹಿಂದುತ್ವದ ಮತಗಳು ನಿಮಗೆ ಬೇಕು ಎಂದರೆ ಸ್ಪಂದಿಸುವ ಕೆಲಸ ಮಾಡಿ ಎಂದು  ಆಕ್ರೋಶದಿಂದಲೇ ಹೇಳಿದ್ದಾರೆ.

 

 

Video Top Stories