2023ರ ಅಂತ್ಯಕ್ಕೆ ರಾಮಮಂದಿರ ಗರ್ಭಗುಡಿ ಸಿದ್ಧ, ಅಲ್ಲೇ ಪೂಜೆ: ವಿಎಚ್‌ಪಿ!
* ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರ
* ರಾಮಮಂದಿರದ ಅಡಿಪಾಯ ಇದೇ ವರ್ಷದ ಸೆಪ್ಟೆಂಬರ್ ಕೊನೇ ಅಥವಾ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಪೂರ್ಣ
* 2023ರ ಅಂತ್ಯಕ್ಕೆ ರಾಮಮಂದಿರ ಗರ್ಭಗುಡಿ ಸಿದ್ಧ, ಅಲ್ಲೇ ಪೂಜೆ: ವಿಎಚ್‌ಪಿ
ನಾಗ್ಪುರ(ಸೆ.07): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮಮಂದಿರದ ಅಡಿಪಾಯವನ್ನು ಇದೇ ವರ್ಷದ ಸೆಪ್ಟೆಂಬರ್ ಕೊನೇ ಅಥವಾ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ಅಲ್ಲದೆ 2023ರ ಡಿಸೆಂಬರ್ ವೇಳೆಗೆ ದೇಗುಲದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಭಕ್ತರಿಗೆ ಮಹಾಪುರುಷ ಶ್ರೀರಾಮನ ದರ್ಶನಕ್ಕಾಗಿ ದೇಗುಲ ಮುಕ್ತವಾಗಲಿದೆ ಎಂದು ಭಕ್ತರಿಗೆ ದೇಗುಲ ಮುಕ್ತವಾಗಲಿದೆ ಎಂದು ವಿಎಚ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದ್ದಾರೆ.
ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಮಿಲಿಂದ್ ಪರಾಂಡೆ ಅವರು, ದೇಗುಲದ ಪೂರ್ಣ ಕಾಮಗಾರಿಗೆ ಸ್ವಲ್ಪ ಹೆಚ್ಚು ಕಾಲಾವಕಾಶ ಬೇಕಾಗಲಿದೆ. ಆದರೆ, 2023ರ ಡಿಸೆಂಬರ್ ವೇಳೆಗೆ ಗರ್ಭಗುಡಿಯ ಕಾಮಗಾರಿ ಪೂರ್ಣಗೊಳಿಸಿ ಪೂಜಾಕೈಂಕರ್ಯಗಳು ಮತ್ತು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ರಾಮ ದೇಗುಲ ನಿರ್ಮಾಣದ ಹೊಣೆಯನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ವಹಿಸಲಾಗಿದ್ದು, 2020ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಗುಲ ನಿರ್ಮಾಣದ ಭೂಮಿ ಪೂಜೆ ಮಾಡಿದ್ದರು.