Asianet Suvarna News Asianet Suvarna News

Vokkaliga Reservation: ಮೀಸಲಾತಿಗಾಗಿ ಒಕ್ಕಲಿಗರ ಮೀಟಿಂಗ್: ಸರ್ಕಾರಕ್ಕೆ ಹೊಸ ಟೆನ್ಶನ್

ರಾಜ್ಯ ಸರ್ಕಾರಕ್ಕೆ ಪಂಚಮಸಾಲಿ ಆಯ್ತು, ಇದೀಗ ಒಕ್ಕಲಿಗ ಮೀಸಲಾತಿಯ ತಲೆನೋವು ಶುರುವಾಗಿದೆ. ಇಂದು ಮಹತ್ವದ ಸಭೆ ನಡೆಯಲಿದೆ.
 

ಒಕ್ಕಲಿಗರ ಮೀಸಲಾತಿ ಕುರಿತು  ಇಂದು ಮಹತ್ವದ ಸಭೆ ನಡೆಯಲಿದ್ದು, ಶೇ. 12%ರಷ್ಟು ಮೀಸಲಾತಿ ನೀಡುವಂತೆ ಒಕ್ಕಲಿಗರು ಪಟ್ಟು ಹಿಡಿದಿದ್ದಾರೆ. ಇಂದು ಮೀಸಲಾತಿ ಹೋರಾಟಕ್ಕೆ ಅಂತಿಮ ರೂಪುರೇಷ ನೀಡುವ ಸಾಧ್ಯತೆಯಿದ್ದು, ಡಿಕೆಶಿ, ಡಿ.ವಿ ಸದಾನಂದಗೌಡ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಸಭೆಗೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೆಗೌಡ, ಹೆಚ್‌‌.ಡಿ ಕುಮಾರಸ್ವಾಮಿ ಸೇರಿ ಒಕ್ಕಲಿಗ ಸಮುದಾಯದ ಪ್ರಮುಖ ರಾಜಕಾರಣಿಗಳಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ಮೀಸಲಾತಿ  ಶೇ.4ರಿಂದ 12ಕ್ಕೆ ಹೆಚ್ಚಿಸುವಂತೆ ಪಟ್ಟು ಹಿಡಿಯಲಾಗಿದ್ದು, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ್‌ ಚಂದ್ರಶೇಖರ್‌, ನಿರ್ಮಾಲನಂದ ಸ್ವಾಮೀಜಿ ಹಾಗೂ ನಂಜಾವಧೂತ ಸ್ವಾಮೀಜಿ ಭಾಗಿಯಾಗಲಿದ್ದಾರೆ.

ಶಿವಮೊಗ್ಗ: ಅಯ್ಯಪ್ಪನ ಸನ್ನಿಧಿಗೆ ಅಕ್ಕಿ ದಾನ ಮಾಡಿದ ಬಿ.ಎಲ್‌. ಸಂತೋಷ್

Video Top Stories