Asianet Suvarna News Asianet Suvarna News

ವಿಜಯಪುರ: ಯೋಧ ಕಾಶಿರಾಯನ ಅಂತ್ಯಕ್ರಿಯೆಗೆ ಹರಿದು ಬಂದ ಜನಸಾಗರ

Jul 4, 2021, 1:49 PM IST

ವಿಜಯಪುರ(ಜು.04): ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಕಾಶಿರಾಯ ಶಂಕರೆಪ್ಪ ಬೊಮ್ಮನಹಳ್ಳಿ ಪಾರ್ಥಿವ ಶರೀರ ಸ್ವಾಗ್ರಾಮ ಉಕ್ಕಲಿಗೆ ಆಗಮಿಸಿದೆ.  ಯೋಧನ ಅಂತಿಮ ನಮನ ಸಲ್ಲಿಸಲು ಗ್ರಾಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಹುತಾತ್ಮ ಯೋಧನ ನೆನೆದು ಜನರು ಕಣ್ಣೀರಿಟ್ಟಿದ್ದಾರೆ. ದೇಶಕ್ಕಾಗಿ ಜೀವತೆತ್ತ ಯೋಧನಿಗೆ ಗ್ರಾಮದ ಜನರು ಅಂತಿಮ ನಮನ ಸಲ್ಲಿಸಿದ್ದಾರೆ. ಯೋಧನ ಅಂತ್ಯಕ್ರಿಯೆಗೆ ಜನಸಾಗರವೇ ಹರಿದು ಬಂದಿದೆ.