Vijayapura: ಪುಟಾಣಿಗಳ ಸಾಧನೆಗೆ ಹುಬ್ಬೇರಿಸಿದ ಗುಮ್ಮಟನಗರಿ ಜನತೆ..!
* ಶಿಕ್ಷಕ ಶ್ರೀಮಂತ ಹಾಗೂ ಬಂಗಾರೆಮ್ಮ ದಂಪತಿಯ ಇಬ್ಬರು ಮಕ್ಕಳ ಸಾಧನೆ
* ಲ್ಯಾಂಟೆನಾ ಕ್ಯಾಮೆರಾ ಸಸ್ಯದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿದ ಭಾಗ್ಯಶ್ರೀ
* ಅಳಿವಿನಂಚಿನಲ್ಲಿರುವ ಸಸ್ಯಗಳ ಬಗ್ಗೆ ಸಂಶೋಧನೆ
ಲಕ್ನೋ(ಮಾ.06): ವಿಜಯಪುರದ ಐಶ್ವರ್ಯ ನಗರದ ನಿವಾಸಿ ಶಿಕ್ಷಕ ಶ್ರೀಮಂತ ಹಾಗೂ ಬಂಗಾರೆಮ್ಮ ದಂಪತಿಯ ಇಬ್ಬರು ಮಕ್ಕಳ ಸಾಧನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಕ್ಕ 7ನೇ ತರಗತಿಯಲ್ಲಿ ಓದುತ್ತಿರುವ ಭಾಗ್ಯಶ್ರೀ ಲ್ಯಾಂಟೆನಾ ಕ್ಯಾಮೆರಾ ಸಸ್ಯದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ವಂಡರ್ ಬುಕ್ ಆಫ್ ರೆಕಾರ್ಡ್ಸ್‌ಗೆ ಭಾಜನರಾಗಿದ್ದಾರೆ. ತಮ್ಮ 6ನೇ ತರಗತಿಯಲ್ಲಿ ಓದುತ್ತಿರುವ ರೇವಣ್ಣ ಸಸಾಲಪನ್ನಿ ಸಸ್ಯದ ಬಗ್ಗೆ ವೈಜ್ಞಾನಿಕ ಸಂಶೋಧನೆ ಮಾಡಿ ಡೈಮಂಡ್ ಬುಕ್ ಆಫ್ ರೆಕಾರ್ಡ್ಸ್ ಪಡೆದು ಹೆಮ್ಮೆಯ ಮಕ್ಕಳಾಗಿದ್ದಾರೆ. ಈ ಎರಡೂ ಸಸ್ಯಗಳು ಅಳಿವಿನಂಚಿನಲ್ಲಿವೆ. ಈ ಎರಡೂ ಸಸ್ಯಗಳು ಔಷಧಿ ಗುಣಗಳನ್ನು ಹೊಂದಿದ್ದು ರೋಗ ಉಪಶಮನ ಮಾಡುತ್ತವೆ.
'ನಾನು ಮತ್ತೆ ಉಕ್ರೇನ್‌ಗೆ ಹೋಗಲ್ಲ, ಭಾರತದಲ್ಲೇ ಮೆಡಿಕಲ್ ಓದಲು ಅವಕಾಶ ಕೊಡಿ' ವಿದ್ಯಾರ್ಥಿಯ ಮನವಿ