ಬೀಳುವ ಸ್ಥಿತಿಯಲ್ಲಿದೆ ಮನೆ ; ತಿಂಗಳ ಹಸುಗೂಸಿನೊಂದಿಗೆ ಬಾಣಂತಿ ಪರದಾಟ
ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ಅದರಿಂದಾಗಿರುವ ಅನಾಹುತ ಒಂದೆರಡಲ್ಲ. ವಿಜಯಪುರಲ್ಲಿ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಿಂಗಳ ಹಸುಗೂಸಿನ ಜೊತೆ ಬಾಣಂತಿ ಭೀಮಾ ನದಿ ಪಕ್ಕದ ಶೆಡ್‌ನಲ್ಲಿ ಆಶ್ರಯ ಪಡೆದಿದ್ದಾರೆ.
ಬೆಂಗಳೂರು (ಅ. 16): ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಅರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ಅದರಿಂದಾಗಿರುವ ಅನಾಹುತ ಒಂದೆರಡಲ್ಲ. ವಿಜಯಪುರಲ್ಲಿ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಿಂಗಳ ಹಸುಗೂಸಿನ ಜೊತೆ ಬಾಣಂತಿ ಭೀಮಾ ನದಿ ಪಕ್ಕದ ಶೆಡ್‌ನಲ್ಲಿ ಆಶ್ರಯ ಪಡೆದಿದ್ದಾರೆ.
ಭೀಮಾ ತೀರದಲ್ಲಿ ಜನರ ಕಣ್ಣೀರು; ನೀರಿನಲ್ಲಿ ಮುಳುಗಿದ ನೂರಾರು ಮನೆಗಳು
ಅವರ ಮನೆ ಬೀಳುವ ಸ್ಥಿತಿಯಲ್ಲಿದೆ. ನೀರು ಮನೆಗೆ ನುಗ್ಗಿದೆ. ಹಾವು, ಚೇಳುಗಳು ಬರುತ್ತಿವೆ. ಇಷ್ಟೆಲ್ಲಾ ಅವಾಂತರ ಆಗುತ್ತಿದ್ದರೂ ಗೋಳು ಕೇಳುವವರೇ ಇಲ್ಲ. ಒಂದು ಕಡೆ ಪ್ರವಾಹ ಭೀತಿ. ಇನ್ನೊಂದು ಕಡೆ ಮನೆ ಬೀಳುವ ಸ್ಥಿತಿ. ಪ್ರತಿವರ್ಷ ಇದೇ ಗೋಳಾಗಿದೆ. ಸರ್ಕಾರ ಸೈಟ್ ಕೂಡಾ ಕೊಡುತ್ತಿಲ್ಲ' ಎಂದು ಬಾಣಂತಿ ಗೀತಾ ಕಣ್ಣೀರಿಟ್ಟಿದ್ದಾರೆ.