ಕಾಫಿ ಫಸಲು ಕಳೆದುಕೊಂಡು ಬೆಳೆಗಾರರು ಕಂಗಾಲು!

 ಅತಿವೃಷ್ಠಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಬೆಳೆ ಕಂಪ್ಲೀಟ್ ನೆಲೆಕಚ್ಚಿದ್ದು ರೈತರು ಮುಂದೇನು ಅಂತಾ ಯೋಚಿಸುವಂತಾಗಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್ ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ. ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಮಳೆ ಜೊತೆಗೆ ಶೀತದ ವಾತಾವರಣದಿಂದ ಕಾಫಿ ಫಸಲು ಗಿಡದಿಂದ ಸಂಪೂರ್ಣ ಉದುರಿ ಬಿದ್ದಿದೆ. ಹೇಗೋ ಕಾಫಿ ಫಸಲು ಉಳಿದ್ರೆ ಜೀವನ ಕಟ್ಟಿಕೊಳ್ಳಬಹದು ಅಂತಾ ಅಂದುಕೊಂಡಿದ್ದ ಮಲೆನಾಡ ರೈತರು ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ದಾರದಹಳ್ಳಿ, ಭೈರಾಪುರ, ಗೌಡಳ್ಳಿ, ದಾರದಹಳ್ಳಿ, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು ಕಾಫಿ ಬೆಳೆಯನ್ನ ಕಳೆದುಕೊಂಡು ರೈತರುಕಂಗಾಲಾಗಿದ್ದಾರೆ.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಸೆ.15):  ಅತಿವೃಷ್ಠಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ ಬೆಳೆ ಕಂಪ್ಲೀಟ್ ನೆಲೆಕಚ್ಚಿದ್ದು ರೈತರು ಮುಂದೇನು ಅಂತಾ ಯೋಚಿಸುವಂತಾಗಿದೆ. ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್ ಪುರ ಸೇರಿದಂತೆ ಮಲೆನಾಡ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ಫಸಲು ಮಣ್ಣು ಪಾಲಾಗಿದೆ. 

ತುಂಬಿದ ತುಂಗಭದ್ರಾ ಜಲಾಶಯ: ನದಿಗೆ 19 ಸಾವಿರ ಕ್ಯುಸೆಕ್‌ ನೀರು

ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಮಳೆ ಜೊತೆಗೆ ಶೀತದ ವಾತಾವರಣದಿಂದ ಕಾಫಿ ಫಸಲು ಗಿಡದಿಂದ ಸಂಪೂರ್ಣ ಉದುರಿ ಬಿದ್ದಿದೆ. ಹೇಗೋ ಕಾಫಿ ಫಸಲು ಉಳಿದ್ರೆ ಜೀವನ ಕಟ್ಟಿಕೊಳ್ಳಬಹದು ಅಂತಾ ಅಂದುಕೊಂಡಿದ್ದ ಮಲೆನಾಡ ರೈತರು ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಅದರಲ್ಲೂ ಮೂಡಿಗೆರೆ ತಾಲೂಕಿನ ದಾರದಹಳ್ಳಿ, ಭೈರಾಪುರ, ಗೌಡಳ್ಳಿ, ದಾರದಹಳ್ಳಿ, ಬಾಳೂರು ಸುತ್ತಮುತ್ತ ಭಾರೀ ಮಳೆಯಾಗಿದ್ದು ಕಾಫಿ ಬೆಳೆಯನ್ನ ಕಳೆದುಕೊಂಡು ರೈತರುಕಂಗಾಲಾಗಿದ್ದಾರೆ.

Related Video