Asianet Suvarna News Asianet Suvarna News

ಕತ್ತೆ ಹಾಲಿಗೆ ಭಾರೀ ಡಿಮ್ಯಾಂಡ್ - ಭರ್ಜರಿ ರೇಟ್ : ಶುರುವಾಯ್ತು ಶುಕ್ರದೆಸೆ

  • ಕತ್ತೆ ಅಂತಾ ಮೂಗು ಮುರಿಯಬೇಡಿ! ಕತ್ತೆಗೂ ಬಂತು ಕಾಲ
  • ಕಾಫಿನಾಡಿನಲ್ಲಿ ಹೊಸ ಪ್ರಯತ್ನ! ಕತ್ತೆ ಹಾಲು ಭರ್ಜರಿ ಮಾರಾಟ
  • ಕತ್ತೆ ಹಾಲಿನಲ್ಲಿ ಜೌಷಧಿ ಗುಣವಿರುವ ಹಿನ್ನೆಲೆ ಭಾರೀ ಬೇಡಿಕೆ 

ಚಿಕ್ಕಮಗಳೂರು (ಸೆ.30):  ಹೀಗೆ ಚಿಕ್ಕಮಗಳೂರಿನಲ್ಲಿ ಬೀದಿ ಬೀದಿಯಲ್ಲಿ ನಿಂತು ಕತ್ತೆ ಹಾಲು ಕರೆದು ಅಲ್ಲಿಯೇ ಜನರಿಗೆ ನೀಡುತ್ತಿರುವುದು ಕಳೆದ ಕೆಲದಿನಗಳಿಂದ ಸಾಮಾನ್ಯವಾಗಿದೆ. ನಗರದ ಹೌಸಿಂಗ್ ಬೋರ್ಡ್, ಕೋಟೆ ಬಡಾವಣೆ ಸುತ್ತಮುತ್ತ ಗುಡಿಸಲು ಹಾಕಿಕೊಂಡು 40ಕ್ಕೂ ಹೆಚ್ಚು ಕತ್ತೆಗಳೊಂದಿಗೆ ಸುಮಾರು 15 ಮಂದಿ ತಂಡವೊಂದು ಬೀಡು ಬಿಟ್ಟಿದೆ.

ಕತ್ತೆ ಹಾಲಿನ ಪನೀರ್ ಗೆ ಚಿನ್ನದಷ್ಟೇ ಬೆಲೆ! ಅಷ್ಟಕ್ಕೂ ಏಕೀ ಡಿಮ್ಯಾಂಡ್?

ನಿತ್ಯ ಬೆಳಗ್ಗೆ ವಿವಿಧ ಬಡಾವಣೆಗಳಿಗೆ ತೆರಳಿ, ಕತ್ತೆ ಹಾಲು ಎಂದು ಕೂಗುತ್ತಾ ಮಾರಾಟ ಮಾಡುತ್ತಿದೆ. ಅದ್ರಲ್ಲೂ ಮುಖ್ಯವಾಗಿ ಮಕ್ಕಳಿಗೆ ಮೂರು ದಿನಗಳ ಕಾಲ ಇದನ್ನು ಕುಡಿಸಿದ್ರೆ ಕೆಮ್ಮು, ನೆಗಡಿ ಗುಣವಾಗಲಿದೆ. ಅಲ್ಲದೆ ಜೀರ್ಣಶಕ್ತಿ ವೃದ್ಧಿಸಲಿದೆ, ಎಂದು ತಮಿಳುನಾಡಿನ ಈ ತಂಡ  ಪ್ರಚಾರ ಮಾಡುತ್ತಿದೆ. ಸಾವಿರಾರು ಹಣ ಸಂಪಾದಿಸುತ್ತಿದ್ದು ಭರ್ಜರಿಯಾಗಿ ಕತ್ತೆ ಹಾಲು ವ್ಯಾಪಾರ ಮಾಡುತ್ತಿದೆ. ಒಂದು ಲೋಳ್ಳೆ ಕತ್ತೆ ಹಾಲಿಗೆ  50 ರೂಪಾಯಿಯಂತೆ ಮಾರಾಟ  ಮಾಡುತ್ತಿದ್ದಾರೆ.