Asianet Suvarna News Asianet Suvarna News

ಷಡಕ್ಷರಿಯವರ ಪುಸ್ತಕಗಳನ್ನು ಕ್ರೋಡೀಕರಿಸಿ ಪರಿವಿಡಿ ಮಾಡಿದರೆ ಓದುಗರಿಗೆ ಅನುಕೂಲ: ರವಿ ಹೆಗಡೆ

ಜೀವನದ ಅನೇಕ ಸಂದರ್ಭಗಳಿಗೆ ಒಗ್ಗುವಂತಹ ಅನೇಕ ಕಥೆಗಳು ಈ ಪುಸ್ತಕದಲ್ಲಿ ಇವೆ. ಇದೆಲ್ಲವನ್ನೂ ಸೇರಿಸಿ ಒಂದು ಪರಿವಿಡಿ ಮಾಡಿದರೆ ಓದುಗರಿಗೆ ಅನುಕೂಲ ಆಗಲಿದೆ ಎಂಬುದು ನನ್ನ ಅಭಿಪ್ರಾಯ: ರವಿ ಹೆಗಡೆ

ಬೆಂಗಳೂರು(ನ.17): ಷಡಕ್ಷರಿಯವರ 'ಕ್ಷಣ ಹೊತ್ತು ಅಣಿ ಮುತ್ತು' ಈ ಪುಸ್ತಕ ಈಗಾಗಲೇ ಮೂರುಲಕ್ಷ ಅರವತ್ತು ಸಾವಿರ ಪ್ರತಿಗಳು ಮಾರಾಟ ಆಗಿವೆ. ಸಣ್ಣ ಸಣ್ಣ ಕಥೆಗಳನ್ನು ಒಳಗೊಂಡ ಪುಸ್ತಕ ಇದು. ಹಿಂದೆ ಪಂಚತಂತ್ರ, ದಿನಕ್ಕೊಂದು ಕಥೆ ರೀತಿಯ ಪುಸ್ತಕಗಳನ್ನು ಓದುತ್ತಾ ಇದ್ದೆವು. ಅಷ್ಟೇ ಸ್ವಾರಸ್ಯಕರವಾಗಿ ಈ ಪುಸ್ತಕಗಳು ಇವೆ. ಜೀವನದ ಅನೇಕ ಸಂದರ್ಭಗಳಿಗೆ ಒಗ್ಗುವಂತಹ ಅನೇಕ ಕಥೆಗಳು ಈ ಪುಸ್ತಕದಲ್ಲಿ ಇವೆ. ಇದೆಲ್ಲವನ್ನೂ ಸೇರಿಸಿ ಒಂದು ಪರಿವಿಡಿ ಮಾಡಿದರೆ ಓದುಗರಿಗೆ ಅನುಕೂಲ ಆಗಲಿದೆ ಎಂಬುದು ನನ್ನ ಅಭಿಪ್ರಾಯ ಅಂತ ಕನ್ನಡ ಪ್ರಭ ಹಾಗೂ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ತಿಳಿಸಿದ್ದಾರೆ. 

ಷಡಕ್ಷರಿಯವರ 'ಕ್ಷಣ ಹೊತ್ತು ಅಣಿ ಮುತ್ತು'  ಬಿಡುಗಡೆಗೊಳಿಸಿ ಮಾತನಾಡಿದ  ಸಿಎಂ ಬಸವರಾಜ ಬೊಮ್ಮಾಯಿ ಅವರು, ಒಬ್ಬ ವ್ಯಕ್ತಿಗೆ ಸದಾಕಾಲ‌ ತನ್ನ ಅಸ್ತಿತ್ವದ ಗುರಿ ಜಾಗೃತವಾಗಿದ್ರೆ ಅವರು ಕ್ರಿಯಾಶೀಲರಾಗಿ ಇರ್ತಾರೆ. ಪ್ರತಿದಿನ ಹಲವಾರು ವಿಚಾರ, ಸಮಸ್ಯೆಗಳಲ್ಲಿ ಇರುತ್ತೇವೆ. ನಮ್ಮ ಬದುಕು, ಗುರಿ ಬಗ್ಗೆ ಚಿಂತನೆ ಮಾಡಲು ಒಂದು ನಿಮಿಷ ಕೂಡ ನಮಗೆ ಸಮಯ ಇಲ್ಲ. ಲೌಕಿಕ ವಿಚಾರಗಳ ಬಗ್ಗೆ ನಮಗೆ ಬಹಳ ಆಸಕ್ತಿ ಇದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಿದರೆ ಪ್ರತಿಕ್ಷಣ ಅಮೃತವಾಗುತ್ತದೆ. ಭೂಮಿ ವ್ಯಾಮೋಹ ಎಲ್ಲಕ್ಕಿಂತ ದೊಡ್ಡದು. ಹೆಣ್ಣುಮಕ್ಕಳಿಗೆ ಚಿನ್ನದ ವ್ಯಾಮೋಹ ಇರೋದಕ್ಕಿಂತ ಪುರುಷರಿಗೆ ಇರುವ ಭೂಮಿ ವ್ಯಾಮೋಹ ಜಾಸ್ತಿಯಾಗಿದೆ ಅಂತ ಹೇಳಿದ್ದಾರೆ. 

ಗುಂಬಜ್ ಗುದ್ದಾಟ: ಸೋಮವಾರದಿಂದ ಚಾಮುಂಡಿ ಫೋಟೋ ಅಭಿಯಾನ

ನಾವು ಎಷ್ಟು ಆಸ್ತಿ ಮಾಡಿದ್ರೂ ಕೊನೆಗೆ ಅದು ನಮ್ಮದಾಗಲ್ಲ. ಷಡಕ್ಷರಿ ಅವರು ಬಹಳ ಚೆನ್ನಾಗಿ ಬರೆಯುತ್ತಾರೆ. ಅವರ ಪುಸ್ತಕಗಳನ್ನು ಓದಿದರೆ ಬಹಳ ಸಂತೋಷ ಆಗುತ್ತೆ. ಬದುಕಿನಲ್ಲಿ ಎರಡು ವಿಚಾರ ಬಹಳ ಕಷ್ಟ. ಒಂದು ಆತ್ಮಸಾಕ್ಷಿ ಯಂತೆ ನಡೆದುಕೊಳ್ಳೋದು. ಮತ್ತೊಂದು ವಯಸ್ಸು ಮರೆತು ಬಾಲ್ಯದ ಮುಗ್ಧತೆ ಹಾಗೇ ಕಾಪಾಡಿಕೊಳ್ಳುವುದು ಅಂತ ತಿಳಿಸಿದ್ದಾರೆ. 

ಬಳಿಕ ಮಾತನಾಡಿದ ಸಚಿವ ವಿ ಸೋಮಣ್ಣ ಅವರು, ರವಿ ಹೆಗಡೆಯವರು ಹೇಳಿದಂತೆ ಷಡಕ್ಷರಿಯವರ ಪುಸ್ತಕಗಳನ್ನು ಕ್ರೋಡೀಕರಿಸಿ ಪರಿವಿಡಿ ಮಾಡಿ. ಇದಕ್ಕೆ ನನ್ನ ಸಹಕಾರ ಕೂಡ ಇದೆ. ಸಿಎಂ ಬಹಳ ಸ್ನೇಹಪರ ಜೀವಿಯಾಗಿದ್ದಾರೆ. ಬಡಜನರ, ಸಾಮಾನ್ಯ ಜನರ ಭಾವನೆಗಳಿಗೆ ಸ್ಪಂದಿಸುವಂತೆ ಪ್ರಧಾನ ಮಂತ್ರಿ ಗಳು ಕೂಡಾ ಕೆಲಸ ಮಾಡ್ತಾ ಇದಾರೆ. ಕೆಂಪೇಗೌಡರ ಪ್ರತಿಮೆ, ಟರ್ಮಿನಲ್ 2 ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಪ್ರಧಾನಿಗಳು ಸಿಎಂ ಅವರನ್ನು ಶ್ಲಾಘಿಸಿದರು. ಅಧಿಕಾರ ಬರುತ್ತೆ, ಹೋಗುತ್ತೆ, ಆದರೆ ಅಧಿಕಾರ ಇದ್ದಾಗ ಎಲ್ಲ ವರ್ಗದವರಿಗೆ ಅನುಕೂಲ ಆಗುವಂತ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೆಲಸ ಮಾಡ್ತಾ ಇದಾರೆ ಅಂತ ಹೇಳಿದ್ದಾರೆ. 
 

Video Top Stories