Bengaluru ಸುತ್ತಮುತ್ತ ಧಾರಾಕಾರ ಮಳೆ : ಗಗನಕ್ಕೇರಿದ ತರಕಾರಿ, ಹೂ ಬೆಲೆ!

*ಬೆಂಗಳೂರು ಸೇರಿದಂತೆ ಸುತ್ತಮುತ್ತ ಜಿಲ್ಲೆಗಳಲ್ಲಿ ನಿರಂತರ ಮಳೆ
*ಅಪಾರ ಪ್ರಮಾಣದ ಬೆಳೆ ಹಾನಿ : ಸಂಕಷ್ಟದಲ್ಲಿ ರೈತ
*ಗಗನ್ನಕ್ಕೇರಿದ ತರಕಾರಿ, ಹೂ ಬೆಲೆ : ಗ್ರಾಹಕ ಕಂಗಾಲು

First Published Nov 14, 2021, 6:16 PM IST | Last Updated Nov 14, 2021, 6:32 PM IST

ಬೆಂಗಳೂರು(ನ.14): ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಳೆದ  ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ (Heavy Rain) ಅಪಾರ ಪ್ರಮಾಣದ ಬೆಳೆ (crops) ನಾಶವಾಗಿದೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಬೆಳೆ ನಾಶವಾಗಿ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಈ ಬೆನ್ನಲೇ ರಾಜ್ಯ ರಾಜಧಾನಿಯಲ್ಲಿ ತರಕಾರಿ, ಹೂ ಬೆಲೆ ಗಗನ್ನಕ್ಕೇರಿದೆ. 

Mandya ಭಾರಿ ಮಳೆ ಆರ್ಭಟ : ಅಪಾರ ಬೆಳೆ ಹಾನಿ- ಬದುಕು ಅಸ್ತವ್ಯಸ್ತ

ಮಳೆಯಿಂದ ಅಪಾರ ಪ್ರಮಾಣದ ಟೋಮ್ಯಾಟೋ (tomato) ಬೆಳೆ ಹಾನಿಯಾಗಿದೆ. ಹೀಗಾಗಿ  20 ರಿಂದ 30 ಇದ್ದ ಟೋಮ್ಯಾಟೋ ಬೆಲೆ ಈಗ 70 ರಿಂದ 80 ರೂಪಾಯಿಯಾಗಿದೆ. ಬೆಲೆ ಏರಿಕೆಯಿಂದ ಕಡಿಮೆ ತರಕಾರಿ ಖರೀದಿಸುತ್ತುದ್ದೇವೆ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ. ಮಳೆ ಕಾರಣದಿಂದ ತರಕಾರಿ ನಾಶವಾಗಿದೆ ಹೀಗಾಗಿ ಬೆಲೆ ಗಗನ್ನಕ್ಕೇರಿದೆ ಎಂದು ವ್ಯಾಪಾರಿಗಳು (Vegetable Vendor) ಹೇಳಿದ್ದಾರೆ. ತರಕಾರಿ ಬೆಲೆ ಏರಿಕೆಯಾಗಿದ್ದು ಗ್ರಾಹಕರನ್ನು ಕಂಗಾಲಾಗಿಸಿದೆ. ಮಾರುಕಟ್ಟೆಯಲ್ಲಿ ಒಂದಡೆಗೆ ಹೂ, ಹಣ್ಣು, ತರಕಾರಿ ಬೆಳೆಗಳು ಸಿಕ್ಕಾಪಟ್ಟೆ ದರ ಹೆಚ್ಚಳವಾದರೆ ಮಳೆಯಿಂದ ಬೆಳೆ ಕಳೆದುಕೊಂಡಿರುವ ರೈತರಿಗೂ ವ್ಯಾಪಕ ಆರ್ಥಿಕ ನಷ್ಟವಾಗಿದೆ

Video Top Stories