
ವಾಸ್ವಾನಿ ಮಿಷನ್‌ನಿಂದ ಜಾಗತಿಕ ವಾಕಥಾನ್, ದೇಶ-ವಿದೇಶದ ಜನರನ್ನು ಒಟ್ಟುಗೂಡಿಸಲು ಸಂದೇಶ
ನಗರದ ಸ್ಯಾಂಕಿಟ್ಯಾಂಕ್ ಬಳಿ ಸಾಧು ಜೆ.ಪಿ. ವಾಸ್ವಾನಿ ಮಿಷನ್ ವತಿಯಿಂದ ದಿ ಮೂಮೆಂಟ್ ಆಫ್ ಕಾಮ್ ಎಂಬ ಜಾಗತಿಕ ವಾಕಥಾನ್ ಆಯೋಜಿಸಲಾಗಿತ್ತು.
ಬೆಂಗಳೂರು (ಜು.28): ನಗರದ ಸ್ಯಾಂಕಿಟ್ಯಾಂಕ್ ಬಳಿ ಸಾಧು ಜೆ.ಪಿ. ವಾಸ್ವಾನಿ ಮಿಷನ್ ವತಿಯಿಂದ ದಿ ಮೂಮೆಂಟ್ ಆಫ್ ಕಾಮ್ ಎಂಬ ಜಾಗತಿಕ ವಾಕಥಾನ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ ಬೆಂಗಳೂರು ಮಾತ್ರವಲ್ಲದೇ ಪುಣೆ, ಮುಂಬೈ, ನವದೆಹಲಿ ಸೇರಿದಂತೆ ವಿದೇಶದ ಜನರನ್ನು ಒಟ್ಟುಗೂಡಿಸುವ ಕೆಲಸ ಆಗಿದೆ. ವಾಸ್ವಾನಿ ಮಿಷನ್‌ನ ಮುಖ್ಯಸ್ಥ ಕೃಷ್ಣ ನೇತೃತ್ವದಲ್ಲಿ ಅಂತರಿಕ ಶಾಂತಿಯನ್ನ ಉತ್ತೇಜಿಸುವ ಹಾಗೂ ಸಮುದಾಯಗಳಲ್ಲಿ ಭಾವನಾತ್ಮಕ ಯೋಗಕ್ಷೇಮ ಮತ್ತು ಏಕತೆಯನ್ನು ಪ್ರೇರೆಪಿಸುವ ಕೆಲಸ ಮಾಡಲಾಯಿತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.