Asianet Suvarna News Asianet Suvarna News

Vanivilas Reservoir: ಕನಸಾಗಿಯೇ ಉಳಿಯಿತು 60 ವರ್ಷಗಳ ಹಳೆಯ ಕನಸು

ಮಧ್ಯ ಕರ್ನಾಟಕದ ಜನರ ಜೀವನಾಡಿ..! ರೈತರ ಅಕ್ಷಯಪಾತ್ರೆ ವಾಣಿವಿಲಾಸ ಜಲಾಶಯ (Vanivilas Reservoir) ಕೇವಲ ಮೂರೇ ಅಡಿಗಳಷ್ಟು ನೀರು ಸಂಗ್ರಹವಾಗಿದ್ದರೆ ಹಲವು ದಶಕಗಳ ಕನಸು ಈಡೇರುತ್ತಿತ್ತು. ಆದರೆ ರಾಜ್ಯ ಸರ್ಕಾರದ ದಿಢೀರ್  ನಿರ್ಧಾರ ದಿಂದಾಗಿ ಇಡೀ ಚಿತ್ರದುರ್ಗ (Chitradurga) ಜಿಲ್ಲೆಯ ರೈತ ಸಮುದಾಯವನ್ನೇ ಬೇಸರಕ್ಕೆ ತಳ್ಳಿದೆ. 

ಬೆಂಗಳೂರು (ಜ. 03): ಮಧ್ಯ ಕರ್ನಾಟಕದ ಜನರ ಜೀವನಾಡಿ..! ರೈತರ ಅಕ್ಷಯಪಾತ್ರೆ ವಾಣಿವಿಲಾಸ ಜಲಾಶಯ (Vanivilas Reservoir) ಕೇವಲ ಮೂರೇ ಅಡಿಗಳಷ್ಟು ನೀರು ಸಂಗ್ರಹವಾಗಿದ್ದರೆ ಹಲವು ದಶಕಗಳ ಕನಸು ಈಡೇರುತ್ತಿತ್ತು. ಆದರೆ ರಾಜ್ಯ ಸರ್ಕಾರದ ದಿಢೀರ್  ನಿರ್ಧಾರ ದಿಂದಾಗಿ ಇಡೀ ಚಿತ್ರದುರ್ಗ (Chitradurga) ಜಿಲ್ಲೆಯ ರೈತ ಸಮುದಾಯವನ್ನೇ ಬೇಸರಕ್ಕೆ ತಳ್ಳಿದೆ. ಅಲ್ಲದೇ ಈ ಬಾರಿಯ ಉತ್ತಮ ಮಳೆಯಿಂದಾಗಿ ಅದೃಷ್ಟವೆಂಬಂತೆ ಬರೋಬ್ಬರಿ ಒಂದು ಶತಮಾನದ ಕನಸಾಗಿದ್ದ ಕೋಡಿ ಬೀಳುವ ‌ ಕನಸು ಸಹ ಕನಸಾಗಿಯೇ ಉಳಿದಿದೆ.  ಹೀಗಾಗಿ ಸ್ಥಳೀಯ ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ (Thippareddi) ಕೂಡ ಅಸಮಾಧಾನಗೊಳ್ಳುವಂತೆ ಮಾಡಿದೆ. 

ಹೀಗಾಗಿ ರಾಜ್ಯ ಸರ್ಕಾರವೇ ನೀರು ಹರಿಸುವ ಭರವಸೆ ನೀಡಿದ್ದೂ,ಅದು ಹುಸಿಯಾಗಿದೆ. ಆದ್ದರಿಂದ ಮೈಸೂರು (Mysuru) ಅರಸರ ಕಾಲದ  ನಿರ್ಮಾಣವಾಗಿರೋ ವಾಣಿವಿಲಾಸ ಸಾಗರ ಕೋಡಿ ಬೀಳುವ ಐತಿಹಾಸಿಕ ಕ್ಷಣಕ್ಕಾಗಿ  ಸರ್ಕಾರ ಹಾಗೂ ಅಧಿಕಾರಿಗಳು ವಾಣಿವಿಲಾಸ ಜಲಾಶಯಕ್ಕೆ ನಿಗದಿಯಂತೆ ಜನವರಿ 30ರ ವರೆಗೂ ನೀರು ಹರಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 ಇನ್ನು ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಇನ್ನೇನು ವಾಣಿವಿಲಾಸ ಜಲಾಶಯ ತುಂಬಿಯೇ ಬಿಡ್ತು, ಶತಮಾನದ ಜಲಾಶಯಕ್ಕೆ ವೈಭವ ಮರುಕಳಿಸುತ್ತೆ ಅಂತ ಇಡೀ ರೈತ ಸಮುದಾಯದಲ್ಲಿ ನಿರೀಕ್ಷೆ ಮೂಡಿಸಿತ್ತು. ಕಳೆದ ನವಂಬರ್ ಹಾಗೂ ಡಿಸೆಂಬರ್ ಆರಂಭದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಿಂದೆಂದೂ ಕಾಣದಷ್ಟು ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ರೈತರಿಗೆ ಇನ್ನಿಲ್ಲದ ಭರವಸೆ ಮೂಡಿಸಿದೆ. ಆದರೆ ವಿಶೇಶ್ವರಯ್ಯ ಜಲ ನಿಗಮ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಏಕಾಏಕಿ ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸದೇ ಇರುವುದು ರೈತರಲ್ಲಿ ನಿರಾಸೆ ಮೂಡಿಸದೆ. ಜೊತೆಗೆ ಕೊಟ್ಟಮಾತಿನಂತೆ ನೀರು ಹರಿಸುವಂತೆ ಸ್ಥಳೀಯ ರೈತರು ಹಾಗೂ ಮುಖಂಡರು ಒತ್ತಾಯಿಸಿದ್ದಾರೆ.

ಒಟ್ಟಾರೆ ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯ ಸರ್ಕಾರ ಆದೇಶ ನೀಡಿದ ಪರಿಕಲ್ಪನೆಯಂತೆ ನೀರು ಹರಿಸಿದರೆ ಮಧ್ಯಕರ್ನಾಟಕದ ಜಲಪಾತ್ರೆ ವಾಣಿವಿಲಾಸ ಜಲಾಶಯದ ವೈಭವ ಮತ್ತೆ ಮರುಕಳಿಸುವ ಕಾಲ ಸನ್ನಿಹಿತವಾಗಿದೆ. ಇನ್ನಾದ್ರು ರಾಜ್ಯ ಸರ್ಕಾರ ಸ್ಥಳೀಯ ಶಾಸಕರ ಒತ್ತಾಯ ಹಾಗೂ ರೈತರ ಅಭಿಲಾಷೆಯಂತೆ ವಿವಿಸಾಗರಕ್ಕೆ ನೀರು ಹರಿಸಿ ಐತಿಹಾಸಿಕ ಸಂಧರ್ಭಕ್ಕೆ‌ ಸಾಕ್ಷಿಯಾಗಬೇಕಿದೆ‌

 

Video Top Stories