ಸ್ಪೀಕರ್ ತವರು ಕ್ಷೇತ್ರದಲ್ಲೇ ಅಮಾನವೀಯತೆ ಮೆರೆದ ಅರಣ್ಯಾಧಿಕಾರಿಗಳು..!

ಮುಖ್ಯಮಂತ್ರಿಗಳೇ, ಸಚಿವರೇ ಇಲ್ಲಿ ಸ್ವಲ್ಪ ನೋಡಿ, ಬಡವನ ಹೊಟ್ಟೆಯ ಮೇಲೆ ಕರುಣೆಯೇ ಇಲ್ಲದ ಅಧಿಕಾರಿಗಳು ವಿಧಾನಸಭಾ ಸ್ಪೀಕರ್ ತವರು ಕ್ಷೇತ್ರದಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿದ್ದಕ್ಕೆ ಬಡವನ ಮನೆ ತೆರವು ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಸಿದ್ದಾಪುರ(ಮೇ.05): ಇಡೀ ಜಗತ್ತೇ ಕೊರೋನಾದಿಂದಾಗಿ ತತ್ತರಿಸಿ ಹೋಗಿದೆ. ಒಬ್ಬರು ಮತ್ತೊಬ್ಬರ ಸಂಕಷ್ಟಕ್ಕೆ ಮನ ಮಿಡಿಯುತ್ತಿದ್ದಾರೆ. ಹೀಗಿರುವಾಗಲೇ ದಪ್ಪ ಚರ್ಮದ ಮಾನವೀಯತೆಯಿಲ್ಲದ ಅರಣ್ಯಾಧಿಕಾರಿಗಳು ಬಡವನೊಬ್ಬ ಕಟ್ಟಿದ ಮನೆಯನ್ನೇ ಕೆಡವಿ ಹಾಕಿ ಕ್ರೌರ್ಯ ಮೆರೆದಿದ್ದಾರೆ. 

ಮುಖ್ಯಮಂತ್ರಿಗಳೇ, ಸಚಿವರೇ ಇಲ್ಲಿ ಸ್ವಲ್ಪ ನೋಡಿ, ಬಡವನ ಹೊಟ್ಟೆಯ ಮೇಲೆ ಕರುಣೆಯೇ ಇಲ್ಲದ ಅಧಿಕಾರಿಗಳು ಅಟ್ಟಹಾಸ ಮೆರೆದಿದ್ದಾರೆ. ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿದ್ದಕ್ಕೆ ಬಡವನ ಮನೆ ತೆರವು ಮಾಡಿದ್ದಾರೆ. 

ಕೊರೋನಾ ಭೀತಿ ನಡುವೆ ಮದ್ಯ ಮಾರಾಟ; ಸಂಕಷ್ಟದಲ್ಲಿ ಪೊಲೀಸರು!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಅರಣ್ಯಾಧಿಕಾರಿಗಳ ದೌರ್ಜನ್ಯದ ವಿಡಿಯೋ ತುಣುಕು ವೈರಲ್ ಆಗಿದೆ. 

Related Video