Asianet Suvarna News Asianet Suvarna News

ಕೊರೋನಾ ಭೀತಿ ನಡುವೆ ಮದ್ಯ ಮಾರಾಟ; ಸಂಕಷ್ಟದಲ್ಲಿ ಪೊಲೀಸರು!

ರಾಜ್ಯದಲ್ಲಿ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಇತ್ತ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಮದ್ಯ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಇದು ಪೊಲೀಸರ ಚಿಂತೆ ಹೆಚ್ಚಿಸಿದೆ. ಮದ್ಯ ಮಾರಾಟದಿಂದ ಪೊಲೀಸರಿಗೆ ತಲೆನೋವು ಹೆಚ್ಚಾಗಿದ್ದು ಹೇಗೆ? ಇಲ್ಲಿದೆ.

Police who backed out for Drink and Drive inspection due to the Coronavirus
Author
Bengaluru, First Published May 5, 2020, 5:44 PM IST

ಬೆಂಗಳೂರು(ಮೇ.05):  ಕೊರೋನಾ ವೈರಸ್ ಕಾರಣ ಪೊಲೀಸರಿಗೆ ಡ್ರಿಂಕ್ ಅಂಡ್ ಡ್ರೈವ್ ಕೇಸ್ ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರಿಗೆ ಕೊರೋನಾ ತಗುಲುವ ಭೀತಿಯಿಂದ ಪೊಲೀಸರು ಹಾಲ್ಕೋ ಮೀಟರ್ ಮೂಲಕ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಪ್ರಮಾಣ ಕಡಿಮೆ ಮಾಡಿದ್ದಾರೆ.  ಆದರೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ಕಾರಣ ಇದೀಗ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. 

ಕೊರೋನಾ ಸೋಂಕಿತ ಪೊಲೀಸ್ ಪೇದೆಯ ಟ್ರಾವೆಲ್ ಹಿಸ್ಟ್ರಿಯೇ ಭಯಾನಕ..!.

ರಾಜ್ಯದಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಿಸುವ ಕಾರಣ ಪೊಲೀಸರು ಕುಡಿದು ವಾಹನ ಚಲಾಯಿಸೋರ ತಪಾಸಣೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹಾಲ್ಕೋ ಮೀಟರ್ ವಾಹನ ಸವಾರರ ಬಾಯಿಗಿಟ್ಟ ತಪಾಸಣೆ ಮಾಡಬೇಕು. ಈ ರೀತಿ ಚೆಕಿಂಗ್ ಕೊರೋನಾ ವೈರಸ್ ಇರುವ ವರೆಗೆ ಅಪಾಯಕಾರಿಯಾಗಿದೆ. ಕೊರೋನಾ ವೈರಸ್ ತಡೆಗೆ ಸಾಮಾಜಿಕ ಅಂತರ ತುಂಬಾ ಮುಖ್ಯ. ಹೀಗಾಗಿ ವಾಹನ ಸವಾರರ ಬಾಯಿಗೆ ಹಾಲ್ಕೋ ಮೀಟರ್ ಇಟ್ಟ ಚೆಕ್ ಮಾಡುವುದ ಅಪಾಯ ಅನ್ನೋ ಕಾರಣಕ್ಕೆ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಕಡಿಮೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಸ್ಕ್ ಹಾಕದವರಿಂದ 89 ಸಾವಿರ ರೂ ದಂಡ ವಸೂಲಿ!.

ಲಾಕ್‌ಡೌನ್ ಸಡಿಲಿಕೆ ಹಾಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಇದೀಗ ಪೊಲೀಸರ ತಲೆ ನೋವು ಹೆಚ್ಚಾಗಿದೆ. ಕುಡಿದು ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಹೀಗಾಗಿ ಪೊಲೀಸರು ಅನುಮಾನ ಬಂದರೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ. 

ಮದ್ಯ ಮಾರಾಟಕ್ಕೆ ಅವಕಾಶ ಸಿಗುತ್ತಿದ್ದಂತೆ ಕುಡುಕರು ದಾರಿಗಳಲ್ಲಿ ತೂರಾಡುತ್ತಿದ್ದಾರೆ. ಇತ್ತ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ರಾತ್ರಿ ಕುಡಿದು ಲಾಂಗ್ ಡ್ರೈವ್ ಸೇರಿದಂತೆ ಆಟಾಟೋಪಕ್ಕೆ ಮುಂದಾಗಿದ್ದಾರೆ. ಹೀಗಾಗಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕೇಸ್ ದಾಖಲಿಕೊಳ್ಳಲು ನಿರ್ಧರಿಸಿದ್ದಾರೆ. 

Follow Us:
Download App:
  • android
  • ios