Udupi: ದೈವಕೋಲದ ವಿಚಾರದಲ್ಲಿ 'ಕೋರ್ಟ್‌ನಲ್ಲಿ ನೋಡಿಕೊಳ್ತೀನಿ' ಎಂದ ವ್ಯಕ್ತಿ ಸಾವು

ಉಡುಪಿ ಜಿಲ್ಲೆಯಲ್ಲಿ ಕಾಂತಾದ ಸಿನಿಮಾದ ಮಾದರಿಯಲ್ಲಿ ನೈಜ ಘಟನೆ ನಡೆದಿದ್ದು, ದೈವದ ಪವಾಡದ ಕಥೆ ನಡೆದಿದೆ.
 

Share this Video
  • FB
  • Linkdin
  • Whatsapp

ಉಡುಪಿ: ಉಡುಪಿಯಲ್ಲಿ ಕಾಂತಾರ ಸಿನಿಮಾ ಹೋಲುವ ದೈವದ ಪವಾಡದ ಕಥೆ ನಡೆದಿದ್ದು, ಕಾಂತಾರ ಸಿನಿಮಾದಲ್ಲಿ ದೈವವನ್ನು ವಿರೋಧಿಸಿ ಕೋರ್ಟಿಗೆ ಹೋಗೋ ವ್ಯಕ್ತಿ ಸಾಯುವ ಘಟನೆ ಇದೆ. ಅದೇ ರೀತಿಯ ಘಟನೆ ಉಡುಪಿಯಲ್ಲಿ ನಡೆದಿದೆ.ಕಡಲತಡಿಯಲ್ಲಿ ರಿಯಲ್‌ ಕಾಂತಾರ ಕಹಾನಿ ನಡೆದಿದ್ದು, ದೈವ ನರ್ತಕನಿಗೆ ಬೆದರಿಕೆ ಒಡ್ಡಿದ ಜಯ ಪೂಜಾರಿಗೆ ಶಿಕ್ಷೆ ಆಯಿತೇ ಪ್ರಶ್ನೆ ಮೂಡಿದೆ. ದೈವಕೋಲಕ್ಕೆ ಸ್ಟೇ ತಂದ ಮರುದಿನವೇ ಜಯಪೂಜಾರಿ ಸಾವನಪ್ಪಿದ್ದು, ದೈವಸ್ಥಾನದ ಆಡಳಿತ ವಿಚಾರದಲ್ಲಿ ಎರಡು ಸಮಿತಿಗಳ ಘರ್ಷಣೆ ನಡೆದಿತ್ತು. ಈ ಹಿನ್ನೆಲೆ ಕೋರ್ಟಿಗೆ ಹೋದ ವ್ಯಕ್ತಿ ತಂಬಿಲ ಸೇವೆ ದಿನವೇ ಎಲ್ಲರ ಎದುರು ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ತಮ್ಮ ಪರ ದೈವ ನುಡಿ ನೀಡಬೇಕೆಂದು ಒತ್ತಡ ಹೇರಿದ್ದ ಎಂಬ ಆರೋಪ ಇದೆ.

Related Video