ಕನ್ನಡಿಗರ ಸ್ವಾಭಿಮಾನದ ಶಕ್ತಿ, ಕೊಳಕು ಭಾಷೆ ಎಂದಿದ್ದ ಗೂಗಲ್‌ಗೆ ಶಾಸ್ತಿ

* ದೇಶದಲ್ಲಿ ಅತ್ಯಂತ ಕೆಟ್ಟ ಮತ್ತು ಕೊಳಕು ಭಾಷೆ ಕನ್ನಡ!
* ಗೂಗಲ್ ಎವಡಟ್ಟಿಗೆ ತಿರುಗಿ ಬಿದ್ದ  ಕನ್ನಡಿಗರು
* ಪ್ರಮಾದ ವಾಪಸ್ ಪಡೆದ ಗೂಗಲ್

First Published Jun 3, 2021, 3:29 PM IST | Last Updated Jun 3, 2021, 3:55 PM IST

ಬೆಂಗಳೂರು(ಜೂ.  03)ದೇಶದಲ್ಲಿ ಅತ್ಯಂತ ಕೆಟ್, ಕೊಳಕು  ಭಾಷೆ ಯಾವುದು? ಇದಕ್ಕೆ ಉತ್ತರ ಕನ್ನಡ! ಏನ್ ಹೀಗ್ ಹೇಳ್ತಾ ಇದ್ದಾರೆ.. ಇವರಿಗೆ ಏನ್ ತಲೆ ಸರಿ ಇದ್ಯಾ..ಇಲ್ವಾ ಅಂತಾ  ಪ್ರಶ್ನೆ ಬರೋದಲ್ಲದೆ ಸಿಟ್ಟು ಬರ್ತಿದೇಯಾ? ನಾವ್ ಹೇಳ್ತಾ ಇರೋದಲ್ಲ.. ಗೂಗಲ್ ಮಾಡಿದ ಕೆಲಸ.. ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದು ಗೂಗಲ್ ಲಿಂಕ್ ತೆಗೆದಿದೆ.

ಗೂಗಲ್​ ಸರ್ಚ್​ಗೆ ಹೋಗಿ ಭಾರತದ ಅತ್ಯಂತ ಕೊಳಕು ಭಾಷೆ ಯಾವುದು? (which is the ugliest Language in India) ಎಂದು ಸರ್ಚ್ ಮಾಡಿದರೆ ಅಲ್ಲಿ ಬರುವ ಉತ್ತರ ಕನ್ನಡ..  ಪಂಪ-ರನ್ನ, ಡಾ ರಾಜ್ ಕುಮಾರ್ ಕೊಂಡಾಡಿದ ಕನ್ನಡಕ್ಕೆ ದೊಡ್ಡ ಅಪಮಾನವಾಗಿದೆ. ಕನ್ನಡಿಗರು ಈ ಪ್ರಮಾದದ ವಿರುದ್ಧ ಸಿಡಿದು ನಿಂತಿದ್ದಾರೆ.

KSRTC ನಮ್ಮದಲ್ಲ, ಕೇರಳದ ಪಾಲಾದ ಹೆಸರು ಮತ್ತು ಲೋಗೋ

ಪರಿಹಾರ  ಹೇಗಾಯ್ತು?   ಇದು ಪ್ರತಿಯೊಬ್ಬಕನ್ನಡಿಗ  ಸ್ವಾಭಿಮಾನದ ಪ್ರಶ್ನೆ. ರಿಪೋರ್ಟ್  ಮಾಡಿ  ಬುದ್ಧಿ ಕಲಿಸಲು ಸಾಧ್ಯವಿದೆ.  ಹಾಗಾದರೆ ಏನು ಮಾಡಬೇಕು.. ಮೊದಲಿಗೆ ಗೂಗಲ್ ಗೆ ತೆರಳಿ ugliest Language in India ಎಂದು ಸರ್ಚ್ ಮಾಡಿ.  ಬಲಗಡೆ ಮೂಲೆಯಲ್ಲಿ ಕೆಳಗಡೆ ಸಿಗುವ ಫೀಡ್ ಬ್ಯಾಕ್ ಆಯ್ಕೆ  ಕ್ಲಿಕ್ ಮಾಡಿ,  ನಂತರ ಆಯ್ಕೆ This is hateful, racist or offensive ಕ್ಲಿಕ್ ಮಾಡಿ ನಿಮ್ಮ ಕಮೆಂಟ್ ಬರೆದು ಪೋಸ್ಟ್ ಮಾಡಿ. ಲಕ್ಷಾಂತರ ಕನ್ನಡಿಗರು ಹೀಗೆ ಮಾಡಿದ್ದು ಗೂಗಲ್ ಇದೀಗ ತನ್ನ ಲಿಂಕ್ ಹಿಂದಕ್ಕೆ ಪಡೆದಿದೆ.