KSRTC ಕಳಕೊಂಡ ಕರ್ನಾಟಕ; ಲೋಗೋ, ಹೆಸರು ನಮ್ಮದಲ್ಲ!

* ಕರ್ನಾಟಕ ಸಾರಿಗೆ ಸಂಸ್ಥೆಗೆ ಆಘಾತಕಾರಿ ಸುದ್ದಿ
* ಇನ್ನು ಮುಂದೆ KSRTC ನಮ್ಮದಲ್ಲ
* ಲೋಗೋ ಮತ್ತು ಹೆಸರು ಬಳಕೆ ಮಾಡುವ ಅಧಿಕಾರ ಇಲ್ಲ
* ಕೇರಳ ಮತ್ತು ಕರ್ನಾಟಕದ ನಡುವಿನ  ಕಾನೂನು ಸಮರ

KSRTC belongs to Kerala Karnataka can no longer use it Says Trade Marks Registry mah

ಬೆಂಗಳೂರು(ಜೂ. 02)  ಕರ್ನಾಟಕಕ್ಕೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಇನ್ನು ಮುಂದೆ ಕೆಎಸ್‌ ಆರ್‌ ಟಿಸಿ ಎಂಬ ಹೆಸರು ನಮ್ಮದಲ್ಲ. ಲೋಗೋ ಸಹ ನಮ್ಮದಲ್ಲ.

"

ಇನ್ನು ಮುಂದೆ, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಮಾತ್ರ 'ಕೆಎಸ್‌ಆರ್‌ಟಿಸಿ' ಪದ ಬಳಸಬಹುದು ಎಂದು  ಕೇಂದ್ರ ವ್ಯಾಪಾರ ಗುರುತು ನೋಂದಾವಣೆ ( ಟ್ರೇಡ್ ಮಾರ್ಕ್ ರಿಜಿಸ್ಟ್ರಿ) ಬುಧವಾರ ತನ್ನ ಅಂತಿಮ ತೀರ್ಪು ಪ್ರಕಟಿಸಿದೆ.

ಸಾರಿಗೆ ನೌಕರರಿಗೆ ಮಿಡಿದ ಸರ್ಕಾರ, ವೇತನ ಬಿಡುಗಡೆ

ಎರಡು ರಾಜ್ಯಗಳ ನಡುವೆ KSRTC ಗಾಗಿ ವರ್ಷಗಳ ಕಾಲ ಕಾನೂನು ಸಮರ ನಡೆದಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಕೆಎಸ್‌ಆರ್‌ ಟಿಸಿ ಎಂದು ಹೆಮ್ಮೆಯಿಂದ ಕರೆಯುತ್ತಿದ್ದೆವು. ಈ ಆದೇಶದ ಕಾರಣ ರಾಜ್ಯದ ಸಾರಿಗೆ ಬಸ್ ಮತ್ತು ಇತರೆ  ಕಡೆ  ನೋಂದಾಯಿಸಿರುವ, ಪ್ರಕಟಮಾಡಿರುವ, ಅಚ್ಚುಹಾಕಿಸಿರುವ ಎಲ್ಲ ಲೋಗೋ ಮತ್ತು ಚಿತ್ರಗಳನ್ನು ತೆಗೆಯಬೇಕಾಗುತ್ತದೆ.

ಏನಿದು ವಿವಾದ?
ಕರ್ನಾಟಕ ಮತ್ತು ಕೇರಳದ ನಡುವೆ  1994ರಿಂದಲೇ ವಿವಾದ ಶುರುವಾಗಿತ್ತು.  ಕೇರಳವೂ ತನ್ನ ಸಾರಿಗೆ ಸಂಸ್ಥೆಗೆ ಕೆಎಸ್‌ಆರ್ ಟಿಸಿ ಎಂದು ಕರೆಯುವುದಕ್ಕೆ ಕರ್ನಾಟಕ ಕೇರಳಕ್ಕೆ ನೋಟಿಸ್ ನೀಡಿತ್ತು.  ಆದರೆ ಕೇರಳ ನಮ್ಮ ಬಳಿ ಟ್ರೇಡ್ ಮಾರ್ಕ್ ಇದೆ ಎಂದು ವಾದ ಮುಂದಿಟ್ಟಿತ್ತು. ಇದಾದ ಮೇಲೆ ಕೇರಳ ರಿಜಿಸ್ಟ್ರಿ ಬಾಗಿಲು ತಟ್ಟಿ ತಾವೇ ಕೆಎಸ್‌ಆರ್ ಟಿಸಿ ಮೊದಲು ಬಳಸಿದ್ದು ಎಂದು ಹಕ್ಕು ಮಂಡನೆ ಮಾಡಿತ್ತು.

27  ವರ್ಷದ ಕಾನೂನು ಸಮರ ಈಗ ಅಂತ್ಯವಾಗಿದೆ.  ಮೈಸೂರು ರಾಜ್ಯ ಕರ್ನಾಟಕವಾದ ನಂತರ ಕರ್ನಾಟಕ ಕೆಎಸ್ ಆರ್‌ ಟಿಸಿ ಎಂದು ಬಳಸುತ್ತಿದ್ದರೆ ನಾವು ಮೊದಲಿನಿಂದಲೂ ಬಳಸುತ್ತಿದ್ದೇವೆ ಎಂದು ವಾದ ಮುಂದಿಟ್ಟಿತ್ತು.

ಕರ್ನಾಟಕದಲ್ಲಿ  1948  ರಲ್ಲಿ ಬಸ್ ಸೇವೆ ಆರಂಭವಾದಾಗ ಅದನ್ನು ಎಂಜಿಆರ್ ಟಿಡಿ ಎಂದು ಕರೆಯಲಾಗಿತ್ತು. ಅಂದರೆ ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ ಎಂಬ ಹೆಸರು ಇತ್ತು.  1973  ರಲ್ಲಿ ಮೈಸೂರು ಕರ್ನಾಟಕವಾದ ನಂತರ ಕೆಎಸ್ ಆರ್‌ಟಿಸಿ ಎಂದು ಬಳಕೆ ಆರಂಭವಾಯಿತು.

ಕೇರಳದಲ್ಲಿ ಮೊದಲು ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ (ಟಿಎಸ್‌ಟಿಡಿ)  ಎಂದು ಕರೆಯಲಾಗುತ್ತಿತ್ತು. 1965  ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಆಯಿತು. 

Latest Videos
Follow Us:
Download App:
  • android
  • ios