
ಕೊರೋನಾ ಕಾಟ: ತುಮಕೂರಲ್ಲಿ ಆತಂಕ ಮೂಡಿಸಿದ ವೃದ್ಧನ ಸಾವು
ತುಮಕೂರು ಜಿಲ್ಲೆಯಲ್ಲಿ ಕೊರೋನಾಗೆ ಎರಡನೇ ಬಲಿ| ಆತಂಕದಲ್ಲಿ ಜಿಲ್ಲೆಯ ಜನತೆ|ಮೂರೇ ದಿನದಲ್ಲಿ ವೃದ್ಧನಲ್ಲಿ ಕೊರೋನಾ ಪಾಸಿಟಿವ್ ಆಗಿದ್ದೇಗೆ?| ಟ್ರಾವೆಲ್ ಹಿಸ್ಟರಿ ಇಲ್ಲದೇ ಸೋಂಕು ಕಾಣಿಸಿಕೊಂಡಿರುವುದು ಮಾತ್ರ ನಿಗೂಢ|
ತುಮಕೂರು(ಏ.30): ಮಹಾಮಾರಿ ಕೊರೋನಾಗೆ ಜಿಲ್ಲೆಯಲ್ಲಿ ಎರಡನೇ ಬಲಿಯಾಗುತ್ತಿದ್ದಂತೆ ಜನರಲ್ಲಿ ಆತಂಕ ಮನೆ ಮಾಡಿದೆ. ನಿನ್ನೆ(ಬುಧವಾರ) ವೃದ್ಧನೊಬ್ಬ ಸಾವನ್ನಪ್ಪಿದ್ದರಿಂದ ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ಏಪ್ರಿಲ್ 22 ರಂದು ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ಏ. 25ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. 26ರಂದು ವೃದ್ಧ ಸಾವನ್ನಪ್ಪಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೇ. 4 ಬಳಿಕ ದೇಶದಲ್ಲಿ ಮತ್ತೆ ಲಾಕ್‌ಡೌನ್? ಸುಳಿವು ಕೊಟ್ಟ ಗೃಹ ಸಚಿವಾಲಯ!
ಮೂರೇ ದಿನದಲ್ಲಿ ವೃದ್ಧನಲ್ಲಿ ಕೊರೋನಾ ಪಾಸಿಟಿವ್ ಆಗಿದ್ದೇಗೆ ಎಂದ ಚರ್ಚೆಹಗಳು ಆರಂಭವಾಗಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಟ್ರಾವೆಲ್ ಹಿಸ್ಟರಿ ಇಲ್ಲದೇ ಸೋಂಕು ಕಾಣಿಸಿಕೊಂಡಿರುವುದು ಮಾತ್ರ ನಿಗೂಢವಾಗಿದೆ.
"