ಮೇ. 4 ಬಳಿಕ ದೇಶದಲ್ಲಿ ಮತ್ತೆ ಲಾಕ್‌ಡೌನ್? ಸುಳಿವು ಕೊಟ್ಟ ಗೃಹ ಸಚಿವಾಲಯ!
ಮೇ 3 ರ ನಂತರವೂ ಲಾಕ್ ಡೌನ್ ಮುಂದುವರೆಯುತ್ತಾ? ಹೌದು ಎನ್ನುತ್ತಿದೆ ಕೇಂದ್ರ ಗೃಹ ಇಲಾಖೆ ಟ್ವೀಟ್. ಮೇ.4 ರ ನಂತರ ಮತ್ತಷ್ಟು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳು ಸಡಲಿಕೆಯಾಗಲಿವೆ. ಆದರೆ ಹಲವು ಜಿಲ್ಲೆಗಳು ಎಂದು ಹೇಳುವ ಮೂಲಕ ಹಾಟ್ ಸ್ಪಾಟ್ಸ್ ಗೆ ಮುಕ್ತಿ ಇಲ್ಲ ಎಂದಿದೆ. ಈ ಮೂಲಕ ಪರೋಕ್ಷವಾಗಿ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸುವ ಸೂಚನೆ ನೀಡಿದೆ. ಹೊಸ ಮಾರ್ಗಸೂಚಿ ಮೇ 4 ರಿಂದ ಜಾರಿಗೆ ಬರಲಿದ್ದು, ಹಲವು ಜಿಲ್ಲೆಗಳಿಗೆ ಮತ್ತಷ್ಟು ವಿನಾಯಿತಿ ಸಿಗಲಿದೆ ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಲಾಗಿದೆ.
ನವದೆಹಲಿ(ಏ.30): ಮೇ 3 ರ ನಂತರವೂ ಲಾಕ್ ಡೌನ್ ಮುಂದುವರೆಯುತ್ತಾ? ಹೌದು ಎನ್ನುತ್ತಿದೆ ಕೇಂದ್ರ ಗೃಹ ಇಲಾಖೆ ಟ್ವೀಟ್. ಮೇ.4 ರ ನಂತರ ಮತ್ತಷ್ಟು ಜಿಲ್ಲೆಗಳಲ್ಲಿ ಲಾಕ್ ಡೌನ್ ನಿಯಮಗಳು ಸಡಿಲಿಕೆಯಾಗಲಿವೆ. ಆದರೆ ಹಲವು ಜಿಲ್ಲೆಗಳು ಎಂದು ಹೇಳುವ ಮೂಲಕ ಹಾಟ್ ಸ್ಪಾಟ್ಸ್ ಗೆ ಮುಕ್ತಿ ಇಲ್ಲ ಎಂದಿದೆ.
ಈ ಮೂಲಕ ಪರೋಕ್ಷವಾಗಿ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸುವ ಸೂಚನೆ ನೀಡಿದೆ. ಹೊಸ ಮಾರ್ಗಸೂಚಿ ಮೇ 4 ರಿಂದ ಜಾರಿಗೆ ಬರಲಿದ್ದು, ಹಲವು ಜಿಲ್ಲೆಗಳಿಗೆ ಮತ್ತಷ್ಟು ವಿನಾಯಿತಿ ಸಿಗಲಿದೆ ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಲಾಗಿದೆ.
ಬಿಸಿಲಿಗೆ ಕೊರೋನಾವೈರಸ್ ಸಾಯುತ್ತಾ? ಇಲ್ಲಿದೆ ವಿಜ್ಞಾನಿಗಳ ಅಚ್ಚರಿಯ ಹೇಳಿಕೆ
ದೇಶದಲ್ಲಿನ ಲಾಕ್‌ಡೌನ್ ಪರಿಸ್ಥಿತಿ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಲಾಗಿದೆ. ಲಾಕ್‌ಡೌನ್‌ನಿಂದ ಈವರೆಗೆ ಪ್ರಚಂಡ ಲಾಭವಾಗಿದೆ. ಕೊರೋನಾ ಪರಿಸ್ಥಿತಿ ಸುಧಾರಣೆಯಾಗಿದೆ. ಹೀಗಾಗಿ ಮೇ 3ರವರೆಗೂ ಕಟ್ಟುನಿಟ್ಟಾಗಿ ಲಾಕ್‌ಡೌನ್ ಪಾಲಿಸಬೇಕು. ಈಗ ಆಗಿರುವ ಲಾಭ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವಾಲಯ ಟ್ವೀಟ್ ಮಾಡಿದೆ.