Asianet Suvarna News Asianet Suvarna News

ಎನ್‌ಕೌಂಟರ್ ಸಂಭ್ರಮಾಚರಣೆಯಲ್ಲೂ ಕಾಮುಕನ ಕಾಟ, ರೋಡ್‌ ರೋಮಿಯೋಗೆ ಧರ್ಮದೇಟು

ಹೈದರಾಬಾದ್ ಪಶುವೈದ್ಯೆ ಅತ್ಯಾಚಾರಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿರುವ ಸಂಭ್ರಮಾಚರಣೆ ಸಂದರ್ಭವೇ ರೋಡ್ ರೋಮಿಯೋ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟಿದ್ದಾನೆ.

First Published Dec 6, 2019, 3:08 PM IST | Last Updated Dec 6, 2019, 3:17 PM IST

ತುಮಕೂರು(ಡಿ.06): ಹೈದರಾಬಾದ್ ಪಶುವೈದ್ಯೆ ಅತ್ಯಾಚಾರಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿರುವ ಸಂಭ್ರಮಾಚರಣೆ ಸಂದರ್ಭವೇ ರೋಡ್ ರೋಮಿಯೋ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟಿದ್ದಾನೆ.

ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕನ ಪನಿಶ್‌ಮೆಂಟ್ ..!

ವಿದ್ಯಾರ್ಥಿನಿಯರನ್ನು ಚೂಡಾಯಿಸಿದ ಯುವಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ರೋಡ್ ರೋಮಿಯೋಗೆ ಗೂಸಾ ಬಿದ್ದಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ. ತಿಪಟೂರು ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮುಂಭಾಗ ಘಟನೆ ನಡೆದಿದ್ದು, ಕಾಲೇಜಿಗೆ ಹೋಗುತ್ತಿದ್ದ ಯುವತಿಯರನ್ನು ಯುವಕ ಚೂಡಾಯಿಸಿದ್ದಾನೆ.

ಹೈದರಾಬಾದ್ ಎನ್‌ಕೌಂಟರ್: ಕಾಫಿ ನಾಡಲ್ಲಿ ಪಟಾಕಿ ಸಿಡಿಸಿ ಸಂಭ್ರಮ

ಸಂಬ್ರಮಾಚರಣೆ ನಡುವಲ್ಲಿಯೇ ಯುವತಿಯರನ್ನು ಚುಡಾಯಿಸಿದ ಭೂಪನಿಗೆ ವಿದ್ಯಾರ್ಥಿನಿಯರು ಸೇರಿ ಸಾರ್ವಜನಿಕರಿಂದ ಗೂಸಾ ಬಿದ್ದಿದೆ. ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Video Top Stories