Asianet Suvarna News Asianet Suvarna News

ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕನ ಪನಿಶ್‌ಮೆಂಟ್ ..!

ವಿದ್ಯಾರ್ಥಿಗಳು ತಪ್ಪು ಮಾಡಿದ್ದಕ್ಕೆ ಪಬ್ಲಿಕ್‌ನಲ್ಲಿ ಶಿಕ್ಷೆ ಕೊಟ್ಟಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಪ್ರವಾಸಿ ತಾಣದ ಪನೀಶ್‌ಮೆಂಟ್ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

First Published Dec 6, 2019, 12:10 PM IST | Last Updated Dec 6, 2019, 2:49 PM IST

ಕೊಡಗು(ಡಿ.06): ವಿದ್ಯಾರ್ಥಿಗಳು ತಪ್ಪು ಮಾಡಿದ್ದಕ್ಕೆ ಪಬ್ಲಿಕ್‌ನಲ್ಲಿ ಶಿಕ್ಷೆ ಕೊಟ್ಟಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಪ್ರವಾಸಿ ತಾಣದ ಪನೀಶ್‌ಮೆಂಟ್ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ನಿಸರ್ಗಧಾಮ ಪ್ರವಾಸಿ ತಾಣದಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರಲ್ಲೊಂದು ಮಾದರಿ ಸ್ಟೋರಿ: ಸುದೀರ್ಘ ಪೊಲೀಸ್ ಸೇವೆಗೆ ಇನ್ಸ್ ಪೆಕ್ಟರ್ ಕೊಟ್ಟ ಗಿಫ್ಟ್

ಮೈಸೂರು ಯುನಿವರ್ಸಿಟಿ ಶಾಲೆ ವಿದ್ಯಾರ್ಥಿಗಳು ಮಡಿಕೇರಿಗೆ ಪ್ರವಾಸ ಬಂದಿದ್ದರು. ಪ್ರವಾಸ ವೇಳೆ ತಪ್ಪು ಮಾಡಿದ್ದಕ್ಕೆ ಶಾಲೆಯ ದೈಹಿಕ ಶಿಕ್ಷಕ ವಿದ್ಯಾರ್ಥಿಗಳಿಗೆ ಪನಿಶ್‌ಮೆಂಟ್ ಕೊಟ್ಟಿದ್ದಾರೆ. ಕೇಳಲು ಹೋದ ಸ್ಥಳೀಯರಿಗೂ ಶಿಕ್ಷಕ ಅವಾಜ್ ಹಾಕಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಪನಿಶ್‌ಮೆಂಟ್ ವೀಡಿಯೋ ವೈರಲ್ ಆಗಿದ್ದು, ದೈಹಿಕ ಶಿಕ್ಷಕನ ಮೃಗೀಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Video Top Stories