Asianet Suvarna News Asianet Suvarna News

Bengaluru:ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್‌: ಓರ್ವ ಬಾಲಕ ಸಾವು

ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್‌ ಹೊಡೆದ ಪ್ರಕರಣದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 12 ವರ್ಷದ ಸುಪ್ರೀತ್‌ ಸಾವನ್ನಪ್ಪಿದ್ದಾನೆ.
 

ಬೆಂಗಳೂರಿನ ನಂದಿನಿ ಲೇಔಟ್‌'ನ ವಿಜಯಾನಂದ ನಗರದಲ್ಲಿ ಪಾರಿವಾಳ ಹಿಡಿಯೋ ಭರದಲ್ಲಿ ಹೈಟೆನ್ಷನ್ ತಂತಿ ತಗುಲಿ ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕವಾಗಿತ್ತು.  ಇಂದು ಸುಪ್ರೀತ್‌ ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಚಂದ್ರು ಹಾಗೂ ಸುಪ್ರೀತ್‌ ಪಾರಿವಾಳ ಹಿಡಿಯಲು ಕಬ್ಬಿಣದ ಸರಳು ಬಳಸಿದ್ದರಿಂದ ಕರೆಂಟ್‌ ಶಾಕ್‌ ಹೊಡೆದಿತ್ತು. ಇನ್ನು  10ವರ್ಷದ ಚಂದ್ರು ಸ್ಥಿತಿ ಸಧ್ಯಕ್ಕೆ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕ್ರಿಮಿನಲ್‌ ಹಿನ್ನೆಲೆ ಪರಿಶೀಲಿಸಿ ನೌಕರಿ ನೀಡಿ: ಪ್ರತಾಪ್‌ ರೆಡ್ಡಿ