Asianet Suvarna News Asianet Suvarna News

ಹೊಗೇನಕಲ್, ಭರಚುಕ್ಕಿ, ವೆಲ್ಲೆಸ್ಲಿ ಸೇತುವೆಗೆ ನಿರ್ಬಂಧ; ಅರಣ್ಯ ಪ್ರದೇಶದಿಂದ ಅಕ್ರಮ ಎಂಟ್ರಿ

ಕಾವೇರಿ ಹೊರಹರಿವು ಹೆಚ್ಚಾದಂತೆ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಪ್ರಸಿದ್ಧ ಹೊಗೇನಕಲ್‌ ಜಲಪಾತ ಭೋರ್ಗರೆಯುತ್ತಿದೆ. ಕೆಆರ್‌ಎಸ್‌ ನಿಂದ 70 ಸಾವಿರಕ್ಕೂ ಅಧಿಕ ಕ್ಯುಸೆಕ್‌ ಹಾಗೂ ಕಬಿನಿಯಿಂದ 30 ಸಾವಿಕ್ಕೂ ಅಧಿಕ ಕ್ಯುಸೆಕ್‌ ನೀರು ಹರಿಬಿಟ್ಟಿರುವುದು ಹಾಗೂ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಪರಿಣಾಮ ಹೊಗೇನಕಲ್‌ನಲ್ಲಿ ಕಾವೇರಿ ರುದ್ರರಮಣೀಯವಾಗಿ ಹರಿಯುತ್ತಿದ್ದಾಳೆ. 

ಚಾಮರಾಜನಗರ (ಜು. 19): ಕಾವೇರಿ ಹೊರಹರಿವು ಹೆಚ್ಚಾದಂತೆ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಪ್ರಸಿದ್ಧ ಹೊಗೇನಕಲ್‌ ಜಲಪಾತ ಭೋರ್ಗರೆಯುತ್ತಿದೆ. ಕೆಆರ್‌ಎಸ್‌ ನಿಂದ 70 ಸಾವಿರಕ್ಕೂ ಅಧಿಕ ಕ್ಯುಸೆಕ್‌ ಹಾಗೂ ಕಬಿನಿಯಿಂದ 30 ಸಾವಿಕ್ಕೂ ಅಧಿಕ ಕ್ಯುಸೆಕ್‌ ನೀರು ಹರಿಬಿಟ್ಟಿರುವುದು ಹಾಗೂ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಪರಿಣಾಮ ಹೊಗೇನಕಲ್‌ನಲ್ಲಿ ಕಾವೇರಿ ರುದ್ರರಮಣೀಯವಾಗಿ ಹರಿಯುತ್ತಿದ್ದಾಳೆ. ನೀರಿನ ಮಟ್ಟಅಪಾಯಕಾರಿ ಸ್ಥಿತಿ ಮೀರಿರುವುದರಿಂದ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತದ ಆದೇಶಕ್ಕೆ ಪ್ರವಾಸಿಗರು ಡೋಂಟ್ ಕೇರ್, ಬೂದಗಟ್ಟ ಅರಣ್ಯ ಪ್ರದೇಶದಿಂದ ಅಕ್ರಮ ಎಂಟ್ರಿ ಕೊಡುತ್ತಿದ್ದಾರೆ. 

Video Top Stories