ಬೆಳ್ಳಂಬೆಳಗ್ಗೆ ಹುಲಿ ಪ್ರತ್ಯಕ್ಷ, ಅರ್ಧ ಗಂಟೆ ರಸ್ತೆಯಲ್ಲೇ ವಾಕಿಂಗ್..!
ಮಡಿಕೇರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಕೊಡಗು ಜಿಲ್ಲೆಯ ಕಾರ್ಮಾಡು ಗ್ರಾಮದಲ್ಲಿ ವ್ಯಾಘ್ರ ದರ್ಶನವಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗ್ರಾಮ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕಾರ್ಮಾಡುನಲ್ಲಿ ಮುಂಜಾನೆ 6 ಗಂಟೆ ಸಮಯದಲ್ಲಿ ರಸ್ತೆ ಮಧ್ಯೆಯೇ ಹುಲಿ ಓಡಾಡಿರುವ ದೃಶ್ಯಗಳು ಲಭಿಸಿದೆ.
ಮಡಿಕೇರಿ(ಜ.22): ಮಡಿಕೇರಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಕೊಡಗು ಜಿಲ್ಲೆಯ ಕಾರ್ಮಾಡು ಗ್ರಾಮದಲ್ಲಿ ವ್ಯಾಘ್ರ ದರ್ಶನವಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಗ್ರಾಮ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕಾರ್ಮಾಡುನಲ್ಲಿ ಮುಂಜಾನೆ 6 ಗಂಟೆ ಸಮಯದಲ್ಲಿ ರಸ್ತೆ ಮಧ್ಯೆಯೇ ಹುಲಿ ಓಡಾಡಿರುವ ದೃಶ್ಯಗಳು ಲಭಿಸಿದೆ.
ಗುಡ್ ಮಾರ್ನಿಂಗ್ ಕಿಡ್ಸ್ ಎಂದ ಹಾವು; ಶಿಕ್ಷಕರ ಜಾಣ್ಮೆಯಿಂದ ಮಕ್ಕಳೆಲ್ಲಾ ಬಚಾವು!
ವಿರಾಜಪೇಟೆ ನಿವಾಸಿ ಸಂಕೇತ್ ಪೂವಯ್ಯ ಎಂಬವರ ಕಾರಿಗೆ ಅಡ್ಡಬಂದ ಹುಲಿ ಸುಮಾರು 30 ನಿಮಿಷ ಕಾಲ ರಸ್ತೆಯಲ್ಲಿ ಸಂಚರಿಸಿದೆ. ಹುಲಿ ಸಂಚಾರ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದಕ್ಷಿಣ ಕೊಡಗಿನ ಭಾಗದಲ್ಲಿ ಹುಲಿಗಳು ಆತಂಕ ಹುಟ್ಟಿಸಿವೆ.Tiger found in madikeri roads in early morning