ಮಂದಿರಗಳಲ್ಲಿ ಕೊಡುವ ತೀರ್ಥವನ್ನು ಕುಡಿಯಬಾರದು: ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್
ಈಗಿರುವ ಎಲ್ಲ ದೇವರುಗಳು ಮನುಷ್ಯರೇ. ನಾವು ದೇವ್ರು ಅಂತಾ ಮಾಡ್ಕೊಂಡಿರೋದು. ದೇವರು ಅಂತಾ 2 ಸಾವಿರ ಕೊಡುವ ಬದಲು, ದುಡಿಯುವಂತೆ ಮಾಡಿ ಎಂದು ಜನತಾ ಪಕ್ಷ ಅಧ್ಯಕ್ಷೆ ಬಿಟಿ ಲಲಿತಾ ನಾಯಕ್ ಹೇಳಿದ್ದಾರೆ.
ಗದಗ: ಈಗಿರುವ ಎಲ್ಲ ದೇವರುಗಳು ಮನುಷ್ಯರೇ. ನಾವು ದೇವ್ರು ಅಂತಾ ಮಾಡ್ಕೊಂಡಿರೋದು. ದೇವರು ಅಂತಾ 2 ಸಾವಿರ ಕೊಡುವ ಬದಲು, ದುಡಿಯುವಂತೆ ಮಾಡಿ. ಗದಗನಲ್ಲಿ ಜನತಾ ಪಕ್ಷ ಅಧ್ಯಕ್ಷೆ ಬಿಟಿ ಲಲಿತಾ ನಾಯಕ್ ಹೇಳಿಕೆ. ಘನತೆಯಿಂದ ದುಡಿದು 5/10 ಸಾವಿರ ರೂಪಾಯಿ ದುಡಿಯುವಂತೆ ಮಾಡ್ಬೇಕು. ಮಂಗಳಮುಖಿಯರೂ ಒಳ್ಳೆಯ ರೀತಿಯಿಂದ ದುಡಿಯಲು ಸಾಧ್ಯವಿದೆ. ಆದ್ರೆ ಅವರಿಗೆ 100 ರೂ ಕೊಟ್ಟು, 1 ರೂ ಇಸ್ಕೊಂಡು ಕಣ್ಣಿಗೆ ಒತ್ತಿಕೊಳ್ತಾರೆ. ಅವರು ದೇವ್ರು, ಆಶೀರ್ವಾದ ಮಾಡ್ತಾರೆ ಅಂತಾ ಮೂಢ ನಂಬಿಕೆ ಬಿತ್ತುತ್ತಿದ್ದಾರೆ. ಬೆಂಗಳೂರಲ್ಲಿ ಒಬ್ಬರೆ ಸಿಕ್ಕರೇ ಕೊಂದುಹಾಕಿಬಿಡ್ತಾರೆ, ಅಷ್ಟು ಗಟ್ಟಿ ಅವರು, ಅವರನ್ನ ದುಡಿಸಿಕೊಳ್ಳಬೇಕು.
ಬಿಟಿ ಲಲಿತಾ ನಾಯಕ್ ಮಾತನ್ನು ಒಪ್ಪೋದಿಲ್ಲ, ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ: ಯುಟಿ ಖಾದರ್
ರಾಮಕೃಷ್ಣ ಹೆಗಡೆ ಆ ಕೆಲಸ ಮಾಡಿದವರು. ಮಾನವ ಶ್ರಮವನ್ನ ಸರ್ಕಾರ ಬಳಸಿಕೊಳ್ಳಬೇಕು. ದೇವರ ಹೆಸರಲ್ಲಿಕುಣಿದವನಿಗೆ 2 ಸಾವಿರ ರೂಪಾಯಿ ಕೊಟ್ಟರೆ ಸಾಲಲ್ಲ. ಪೂಜೆ ಮನೆಗಳಲ್ಲಿ ಮಾಡಿಕೊಳ್ಳಲಿ, ದೇವಸ್ಥಾನದಲ್ಲೂ ಜ್ಞಾನ ಸಿಗಲ್ಲ. ದುಡಿದವರ ಹಣವನ್ನ ಅಲ್ಲೇಕೆ ಕೊಡಬೇಕು? ದೇವರ ಹೆಸರಲ್ಲಿ ದುಡ್ಡು ಕೊಡಿ ಅಂತಾರೆ. ಈಗ ತಿಳುವಳಿಕೆ ಇದೆ ಕೊಡಲ್ಲ. ಹಣ ಕೊಡದಿದ್ರೆ ತೀರ್ಥ ಕೊಡಲ್ಲ. ಆ ತೀರ್ಥ ಕುಡೀಬೇಡಿ. ಎಷ್ಟೊ ದಿನದ ಕಿಲುಬು ಇರುತ್ತೆ. ಈ ಹಿಂದೆ ಕೃಷ್ಣಯ್ಯ ಶೆಟ್ಟಿ ಗಂಗಾಜಲ ಕೊಟ್ಟರು. ಟ್ಯಾಂಕರ್ ನಲ್ಲಿ ಗಂಗಾಜಲ ತರಿಸಿದ್ದೀವಿ ಅಂದ್ರು. ನಮಗೂ ಸ್ವಲ್ಪ ಕೊಟ್ಟಿದ್ರು. ಮುಖಕ್ಕೆ ಉಗ್ಗಿ ವಾಪಾಸ್ ಕಳಿಸಿದ್ವಿ. ಅಲ್ಲಿಹೋಗಿ ನೋಡಿ ಗಂಗೆಯಲ್ಲಿ ಹೆಣಗಳು ತೇಲುತ್ತಿವೆ. ಬೋಟ್ ನಲ್ಲಿ ಹೋದ್ರೆ ಬುರುಡೆಗಳು ತಾಗುತ್ತವೆ. ಅಷ್ಟು ಹೊಲಸ ಮಾಡಿಟ್ಟಿದಿವಿ. ಪೂಜೆ ಅಂದ್ರೆ ಕೆರೆ ಸ್ವಚ್ಛವಾಗಿಡುವುದು ಮನಸ್ಸನ್ನ ಸ್ವಚ್ಛವಾಗಿಟ್ಟುಕೊಳ್ಳೋದು. ದೇವರ ಹೆಸರು ಹೇಳಿ ಕುಣಿಯುವವನಿಗೆ ಸಾರ್ವಜನಿಕ ಹಣ ಕೊಡೋದು ಇಷ್ಟ ಇಲ್ಲ. ಅವನಿಗೆ ಕೆಲಸ ಕೊಡಿ. ದುಡಿದು ಉಟ ಮಾಡಲು ಹಚ್ಚಿ.