Yadagir: ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ ನಿರ್ಮಾಣ ಮಾಡಿದ ಶಿಕ್ಷಕ

ಯಾದಗಿರಿ (Yadagir) ಜಿಲ್ಲೆ ಶಹಾಪುರ ತಾಲ್ಲೂಕಿನ ಸಗರ ಪ್ರೌಢಶಾಲೆಯ ಶಿಕ್ಷಕ ವಿಶ್ವನಾಥ್ ವಿನೂತನ ಪ್ರಯೋಗ ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ (Maths Lab) ನಿರ್ಮಾಣ ಮಾಡಿದ್ದಾರೆ. 

First Published Jan 26, 2022, 11:12 AM IST | Last Updated Jan 26, 2022, 2:22 PM IST

ಯಾದಗಿರಿ (ಜ. 26): ಇಲ್ಲಿನ ಶಹಾಪುರ ತಾಲ್ಲೂಕಿನ ಸಗರ ಪ್ರೌಢಶಾಲೆಯ ಶಿಕ್ಷಕ ವಿಶ್ವನಾಥ್ ವಿನೂತನ ಪ್ರಯೋಗ ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ (Maths Lab) ನಿರ್ಮಾಣ ಮಾಡಿದ್ದಾರೆ. ಪ್ರಮೇಯಗಳು, ರೇಖಾಗಣಿತ, ಸ್ಕೇಲ್, ತ್ರಿಭುಜ ಮಾದರಿಗಳು, ಗಣಿತಜ್ಞರ ಪರಿಚಯ ಮಾಡಿಕೊಡಲಾಗಿದೆ. 

Chitradurga Govt Medical College: ಕೊನೆಗೂ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು

'ನಮ್ಮ ವಿದ್ಯಾರ್ಥಿಗಳು ಸುಲಭವಾಗಿ ಗಣಿತವನ್ನು ಕಲಿಯಲಿ, ಅವರಿಗೆ ಆಸಕ್ತಿ ಬರಲಿ ಎಂದು ನಾನು ಈ ಪ್ರಯೋಗ ಮಾಡಿದ್ದೇನೆ. ವಿದ್ಯಾರ್ಥಿಗಳು ಕಲಿಯುವುದು ನೋಡಿ ಖುಷಿಯಾಗುತ್ತದೆ' ಎಂದು ಶಿಕ್ಷಕ ವಿಶ್ವನಾಥ್ ಹೇಳಿದ್ದಾರೆ.