Chitradurga Govt Medical College: ಕೊನೆಗೂ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು

  • ಕೋಟೆನಾಡಿಗೆ ಸರ್ಕಾರಿ‌ ಮೆಡಿಕಲ್ ಕಾಲೇಜು ಮಂಜೂರು
  • ಸರ್ಕಾರಿ‌ ಮೆಡಿಕಲ್‌ ಕಾಲೇಜೇ ಬೇಕು ಎಂದ್ದಿದ್ದ ಸ್ಥಳೀಯರು 
  • ಮೆಡಿಕಲ್ ಕಾಲೇಜು ಮಂಜೂರು ಮಾಡಲು ಸಿಎಂ ಸೂಚನೆ 
  • ಮುಂಬರುವ ಬಜೆಟ್‌ನಲ್ಲಿ ಘೋಷಣೆ ಮಾಡುವ ಭರವಸೆ
First Published Jan 25, 2022, 12:25 PM IST | Last Updated Jan 25, 2022, 12:28 PM IST

ಚಿತ್ರದುರ್ಗ(ಜ.25):  ಕೋಟೆನಾಡು ಚಿತ್ರದುರ್ಗ (Chitradurga) ಜಿಲ್ಲೆ ಬರ ಪೀಡಿತ ಪ್ರದೇಶ ಆಗಿರುವ ಕಾರಣ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ದೊರಕಬೇಕು ಎಂಬುದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಒತ್ತಾಸೆಯಾಗಿತ್ತು. ಅದರಂತೆಯೇ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಹಾಗೂ ಹೋರಾಟಗಾರರು ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು (Medical College) ಬೇಕು ಎಂದು ಹಲವು ಬಾರಿ ಧ್ವನಿ ಎತ್ತಿದ ನಿದರ್ಶನಗಳುಂಟು. ಅದರಂತೆ ಬಿಎಸ್ ವೈ ಸಿಎಂ ಆಗಿದ್ದ ವೇಳೆ ಗೃಹ ಸಚಿವರಾಗಿದ್ದ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವರಾಗಿದ್ದ ಡಾ. ಕೆ ಸುಧಾಕರ್ ಕೋಟೆನಾಡಿಗೆ ಭೇಟಿ ನೀಡಿ ಪ್ರೈವೇಟ್  ಮೆಡಿಕಲ್ ಕಾಲೇಜು ನೀಡಲಾಗುವುದು ಎಂದು ಭರವಸೆ ನೀಡಿ ಜಿಲ್ಲಾಸ್ಪತ್ರೆ ಹಿಂಭಾಗದ ಸ್ಥಳವನ್ನು ಪರಿಶೀಲನೆ ಮಾಡಿದ್ದರು. ಆದ್ರೆ ನಮಗೆ ಸರ್ಕಾರಿ‌ ಮೆಡಿಕಲ್‌ ಕಾಲೇಜೆ ಬೇಕು ಎಂದು ಹಲವು ಸ್ಥಳೀಯ ನಾಯಕರು ಅದರಲ್ಲೂ ವಿಶೇಷವಾಗಿ ಚಿತ್ರದುರ್ಗ ಹಿರಿಯ ಶಾಸಕ ತಿಪ್ಪಾರೆಡ್ಡಿ ಹಲವು ಬಾರಿ ಅಪಸ್ವರ ಎತ್ತಿದ್ದರು. ಅದರ ಪ್ರತಿಫಲವೇ  ಹಿರಿಯೂರು ನಗರಕ್ಕೆ ಆಗಮಿಸಿದ್ದ ಆರೋಗ್ಯ ಸಚಿವರು ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಲು ಸಿಎಂ ಸೂಚನೆ ನೀಡಿದ್ದಾರೆ. ಮುಂಬರುವ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು ಎಂದು ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ತಿಳಿಸಿದರು.

AKKAMAHADEVI WOMEN'S UNIVERSITY ಮುಚ್ಚುವ ಪ್ರಶ್ನೇಯೇ ಇಲ್ಲವೆಂದ ಕಾರಜೋಳ

ಇನ್ನೂ ಈ ಬಗ್ಗೆ ಸ್ವತಃ ಜಿಲ್ಲೆಯ ಹಿರಿಯ ಶಾಸಕರಾದ ತಿಪ್ಪಾರೆಡ್ಡಿ ಅವರನ್ನ ಕೇಳಿದ್ರೆ, ಈ ವಿಚಾರವಾಗಿ ಸಿಎಂ ಅವರೇ ನನ್ನನ್ನು ಖುದ್ದು ಕರೆದು ನಿಮ್ಮ ಒತ್ತಾಯದ‌ ಮೇರೆಗೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡಲು ಒಪ್ಪಿದ್ದೇನೆ. ಸದ್ಯದಲ್ಲೇ ಅದರ ಬಗ್ಗೆ ಸಂಪೂರ್ಣ ವಿವರ ನೀಡಲಾಗುಗುವುದು ಎಂದು ಭರವಸೆ ನೀಡಿದ್ರು. ಈ ಬಾರಿ ಮಾತ್ರ ನಮ್ಮ‌ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಆಗೋದು ಶತಃಸಿದ್ದ ಎಂದರು.