Asianet Suvarna News Asianet Suvarna News

ಕೊರೋನಾ ನಡುವೆಯೇ ಬಂದ ತೌಕ್ತೇ ಚಂಡಮಾರುತ, ಹೈ ಅಲರ್ಟ್

*  ಕೊರೋನಾ ಅಬ್ಬರದ ನಡುವೆ ಚಂಡಮಾರುತದ ಆರ್ಭಟ
* ತೌಕ್ತೇ ಚಂಡಮಾರುತ ಬಂದಿದೆ
* ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳು ವಾಪಸ್
* ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ಭಾರೀ ಮಳೆ ಸೂಚನೆ

May 14, 2021, 9:25 PM IST

ಉಡುಪಿ(ಮೇ 14)  ಕೊರೋನಾ ಅಬ್ಬರದ ನಡುವೆ ಚಂಡಮಾರುತದ ಆರ್ಭಟ ಶುರುವಾಗಿದೆ. . ಈ ಚಂಡಮಾರುತಕ್ಕೆ ತೌಕ್ತೇ ಎಂದು ಹೆಸರಿಡಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.

ಇನ್ನು ನಾಲ್ಕು ದಿನ ಮಳೆ ಆರ್ಭಟ ಇರಲಿದೆ

ಉಡುಪಿ ಸಮುದ್ರ ತೀರದಲ್ಲಿ ಎಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ತೌಕ್ತೇ ಚಂಡಮಾರುತದ ಹಿನ್ನೆಲೆಯಲ್ಲಿ  ಕರ್ನಾಟಕ, ಕೇರಳ, ಸೇರಿದಂತೆ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.