ಬೆಂಗಳೂರಿನಲ್ಲಿ ಮೆಟ್ರೋ ಪಿಲ್ಲರ್‌ಗೆ ತಾಯಿ-ಮಗು ಬಲಿ: ಕಾಮಗಾರಿ ಸ್ಥಳದಲ್ಲಿ ಮೃತ್ಯು ರಣಕೇಕೆ

ರಾಜಧಾನಿಯ ಜನರೇ ಎಚ್ಚರ ಎಚ್ಚರ ನಿಮ್ಮ ಪಾಡಿಗೆ ನೀವು ರಸ್ತೆಯಲ್ಲಿ ಹೋಗುವಾಗಲೂ ಹುಷಾರ್‌ ಮೆಟ್ರೋ ಕಾಮಗಾರಿ ಆಸುಪಾಸು ಓಡಾಡುವಾಗ ಎಚ್ಚರಿಕೆಯಿರಲಿ. ಮೆಟ್ರೋ ಪಿಲ್ಲರ್‌ಗಳ ಬಗ್ಗೆ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ಅದರ ಡಿಟೇಲ್ಸ್ ಇಲ್ಲಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನಲ್ಲಿ ಮೆಟ್ರೋ ಡೆಡ್ಲಿ ಅಟ್ಟಹಾಸಕ್ಕೆ ಬೆಂಗಳೂರು ಬೆಚ್ಚಿಬಿದ್ದಿದ್ದು, ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಮೃತ್ಯು ರಣಕೇಕೆ ಹಾಕುತ್ತಿದೆ. ಮೆಟ್ರೋ ಮೊದಲ ಹಂತದ ಕಾಮಗಾರಿ ವೇಳೆಯೂ ಸಾಲು ಸಾಲು ದುರಂತ ನಡೆದಿದ್ದು, ಜೀವಗಳು ಬಲಿಯಾದ್ರೂ, ಮೆಟ್ರೊ ನಿಗಮದ ಅಧಿಕಾರಿಗಳು ಗಪ್‌ಚುಪ್‌ ಎಂದಿದ್ದಾರೆ. ಮೆಟ್ರೊ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ‌. ನಿನ್ನೆಯಷ್ಟೆ ತಾಯಿ ಮಗು ಇಬ್ಬರು ಮೃತ ಪಟ್ಟಿದ್ದರು, ಕೆಂಪೇಗೌಡ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಸಲು ಕೆ.ಆರ್‌ ಪುರಂ ಹಾಗೂ ನಾಗವಾರು ನಡುವೆ ನಡೆಯುತ್ತಿರುವ ಮೆಟ್ರೊ ಕಾಮಗಾರಿ ವೇಳೆ ಅವಘಡ ಸಂಭವಿಸಿದ್ದು, ಇದರಲ್ಲಿ ಇಬ್ಬರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

Related Video