ತೆಪ್ಪದ ಮೇಲೆ ಪೋಸ್; ಬಿಲ್ಡಪ್ ಪೊಲೀಸಪ್ಪ ಅಮಾನತು

ಜನರು ನೆರೆಯಿಂದ ಸಂಕಷ್ಟದಲ್ಲಿದ್ದಾಗ ಬಿಲ್ಡಪ್ ಕೊಟ್ಟ ಕಲ್ಬುರ್ಗಿ ನೆಲೋಗಿಯ ಬಿಲ್ಡಪ್ PSI ಮಲ್ಲನಗೌಡ ಯಲಗೋಡ ಸಸ್ಪೆಂಡ್ ಆಗಿದ್ದಾರೆ. 

First Published Oct 23, 2020, 12:25 PM IST | Last Updated Oct 23, 2020, 12:49 PM IST

ಬೆಂಗಳೂರು (ಅ. 23): ಜನರು ನೆರೆಯಿಂದ ಸಂಕಷ್ಟದಲ್ಲಿದ್ದಾಗ ಬಿಲ್ಡಪ್ ಕೊಟ್ಟ ಕಲ್ಬುರ್ಗಿ ನೆಲೋಗಿಯ ಬಿಲ್ಡಪ್ PSI ಮಲ್ಲನಗೌಡ ಯಲಗೋಡ ಸಸ್ಪೆಂಡ್ ಆಗಿದ್ದಾರೆ. 

ತೆಪ್ಪದ ಮೇಲೆ ನಿಂತು ಬಿಲ್ಡಪ್ ಕೊಟ್ಟ ಪೊಲೀಸಪ್ಪ, ಮೇಕೆ ಮರಿ ಹಿಡಿದುಕೊಂಡು ಸಖತ್ ಪೋಸ್!

ತೆಪ್ಪದ ಮೇಲೆ ಹೋಗಿ ನಿಂತು ಮಲ್ಲನಗೌಡ ಪೋಸ್ ಕೊಟ್ಟಿದ್ದರು. ಆಮೇಲೆ ಜನರೇ ತೆಪ್ಪವನ್ನು ತಳ್ಳಿಕೊಂಡು ಬರಬೇಕಾಯಿತು. ನಂತರ ಮೇಕೆ ಮರಿಯನ್ನು ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. ಇವರ ಹೈಡ್ರಾಮಾ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಅದರ ಇಂಪ್ಯಾಕ್ಟ್ ಎಂಬಂತೆ ಮಲ್ಲನಗೌಡ ಅಮಾನತುಗೊಂಡಿದ್ದಾರೆ. 

Video Top Stories