Asianet Suvarna News Asianet Suvarna News

Suvarna cover story:ರಾಗಿ ಬೆಳೆದ ರೈತರ ಕಷ್ಟ ಯಾರಿಗೂ ಬೇಡ..!

ರಾಗಿ ಬೆಳೆಗೆ ಸರ್ಕಾರ ಘೋಷಣೆ ಮಾಡಿದ ಬೆಂಬಲ ಬೆಲೆ ಪಡೆಯಲು ರೈತರು ಪಡುವ ಕಷ್ಟವನ್ನು ಹಾಗೂ ಲಂಚಾವತಾರವನ್ನು  ಹೊಸದುರ್ಗದ ಎಪಿಎಂಸಿಯಲ್ಲಿ ನೀವೇ ಕಣ್ಣಾರೆ ನೋಡಿ. 

ಹೊಸದುರ್ಗ : ರಾಗಿ ಬೆಳೆಗೆ ಸರ್ಕಾರ ಬಂಬಲ ಬೆಲೆಯನ್ನೇನೋ ಘೋಷಣೆ ಮಾಡಿದೆ. ಆದರೆ, ಅದನ್ನು ಪಡೆಯಲು ರೈತರು ಭಾರಿ ಕಷ್ಟಪಡುತ್ತಿದ್ದಾರೆ. ಹೊಸದುರ್ಗದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಡೆಯುವ ಕರ್ಮಕಾಂಡ ಮತ್ತು ಲಂಚಾವತಾರವನ್ನು ನೀವೇ ಕಣ್ಣಾರೆ ನೋಡಿ. 

ಹಮಾಲಿಗಳಿಗೆ 4 ಸಾವಿರ, ಅಧಿಕಾರಿಗಳಿಗೆ 1,500 ಹಾಗೂ ಟ್ರ್ಯಾಕ್ಟರ್‌ಗೆ 8 ಸಾವಿರ ರೂ. ಕೊಡಬೇಕು. ಎಲ್ಲವನ್ನೂ ಕೊಟ್ಟರೆ ಮಾತ್ರ ರಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ದಲ್ಲಿ ರಾಗಿ ಮಾರಾಟ ಮಾಡೋಕೆ ಆಗುವುದಿಲ್ಲ. ರೈತರು ತಂದ ರಾಗಿಯನ್ನು ಗ್ರೇಡ್‌ ಮಾಡಿ ಚೀಟಿ ಬರೆದುಕೊಡಬೇಕು. ಆದರೆ, ಅಲ್ಲಿ ನಡೆಯೋದೇ ಬೇರೆ. ಗ್ರೇಡ್‌ ಮಾಡುವ ಮೊದಲೆ ರಾಗಿಯ ಗ್ರೇಡ್‌ ಚೀಟಿ ಕೊಡುವ ಮುಂಚೆ ಅವರಿಗೆ ಹಣವನ್ನು ಕೊಡಬೇಕು. ಹಣ ಕೊಟ್ಟರೆ ಮಾತ್ರ ರೈತರಿಗೆ ಗ್ರೇಡ್‌ ಚೀಟಿ ಕೊಡಲಾಗುತ್ತದೆ.

ಇಲ್ಲವಾದರೆ ಗ್ರೇಡ್‌ ಚೀಟಿ ಕೊಡದೇ ಜರಡಿ ಹಾಕಿ, ಧೂಳು ಇದೆ ಗಾಳಿಗೆ ತೂರಿಕೊಂಡು ಬನ್ನಿ ಎಂದು ಕ್ಯಾತೆ ತೆಗೆಯುತ್ತಾರೆ. ಆಗ ಸಾವಿರಾರು ರೂಪಾಯಿ ಟ್ರ್ಯಾಕ್ಟರ್‌ ಬಾಡಿಗೆ ಕೊಟ್ಟು ರಾಗಿಯನ್ನು ಮಾರುಕಟ್ಟೆಗೆ ತಂದ ರೈತರು ವಾಪಸ್‌ ತೆಗೆದುಕೊಂಡು ಹೋಗಲಾಗದೇ ಗ್ರೇಡ್‌ ಕೊಡುವ ವ್ಯಕ್ತಿಗೆ ಹಣವನ್ನು ಕೊಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ವ್ಯಕ್ತಿಗಳು ಪ್ರತಿನಿತ್ಯ ಸಾವಿರಾರು ರೈತರಿಂದ ಲಕ್ಷಾಂತರ ರೂ. ಲೂಟಿ ಮಾಡುತ್ತಾರೆ.

Video Top Stories