
ಭ್ರಷ್ಟ ಅಧಿಕಾರಿಗಳ ಪತ್ತೆಗೆ ವಿಚಕ್ಷಣ ದಳಕ್ಕೆ ಸೂಚನೆ: ಸಿಎಂ ಬೊಮ್ಮಾಯಿ
ಸುವರ್ಣ ನ್ಯೂಸ್ ಕವರ್ ಸ್ಟೋರಿಯ ವರದಿಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, 14 ಮಂದಿ ಅಧಿಕಾರಿಗಳ ಅಮಾನತಿಗೆ ಆದೇಶಿಸಿದೆ ಎಂದು ತಿಳಿಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಲಂಚಾವತಾರ ಕುರಿತು ಸುವರ್ಣ ನ್ಯೂಸ್ ಬಿತ್ತರಿಸಿದ್ದ ವರದಿಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ 14 ಮಂದಿ ಅಧಿಕಾರಿಗಳ ಅಮಾನತಿಗೆ ಆದೇಶಿಸಿದೆ. ಇಂಥ ಅಧಿಕಾರಿಗಳ ಪತ್ತೆಗೆ ವಿಚಕ್ಷಣ ದಳಕ್ಕೆ ಸೂಚಿಸಿದ್ದೇನೆ ಎಂದರು. ಸುದೀರ್ಘ ಒಂದೇ ಕಡೆ ಇರುವ ಅಧಿಕಾರಿಗಳನ್ನು ವರ್ಗಾಯಿಸಲು ಹಣಕಾಸು ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದರು. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಸಿಎಂ ಗರಂ ಆಗಿದ್ದು, ಕವರ್ ಸ್ಟೋರಿ ಬಳಿಕ 14 ಮಂದಿ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Cyber Crimes: ಕ್ರಿಸ್ಮಸ್, ಹೊಸ ವರ್ಷದ ರಜಾ ಅವಧಿಯಲ್ಲಿ ಸೈಬರ್ ವಂಚಕರು ಸಕ್ರಿಯ, ಹುಷಾರ್