ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ದಿಢೀರ್ ರಾಜೀನಾಮೆ
ಬಿಜೆಪಿಯ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಸುರೇಶ್ ಗೌಡ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೆಯ ಜನತೆಗೆ ಅವರು ಪತ್ರ ಬರೆದಿದ್ದು, ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆಯನ್ನು ‘ ಖಚಿತ ಪಡಿಸಿರುವ ಅವರು, ರಾಜೀನಾಮೆಗೆ ಕಾರಣವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷನಾದ ಬಳಿಕ ಹಲವು ಸವಾಲುಗಳು ಎದುರಾದವು. ಅದರಲ್ಲಿ ಲೋಕಸಭಾ ಚುನಾವಣೆ ಜತೆಗೆ, ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯೂ ಒಂದಾಗಿತ್ತು. ಇದಕ್ಕೆಲ್ಲ ನನ್ನ ಗ್ರಾಮಾಂತರ ಕ್ಷೇತ್ರದ ಜನರ ಆಶೀರ್ವಾದ, ಸಹಕಾರ, ಧೈರ್ಯವೇ ಕಾರಣ. ಈ ಸಂದರ್ಭದಲ್ಲಿ ನನ್ನ ಈ ಎಲ್ಲಾ ಜನರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.
ತುಮಕೂರು (ಸೆ.28): ಬಿಜೆಪಿಯ (BJP) ತುಮಕೂರು (Tumakuru) ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಸುರೇಶ್ ಗೌಡ (Suresh Gowda) ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೆಯ ಜನತೆಗೆ ಅವರು ಪತ್ರ ಬರೆದಿದ್ದು, ಧನ್ಯವಾದ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆಯನ್ನು ಖಚಿತ ಪಡಿಸಿರುವ ಅವರು, ರಾಜೀನಾಮೆಗೆ ಕಾರಣವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ.
ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ದಿಢೀರ್ ರಾಜೀನಾಮೆ: ಅಚ್ಚರಿ ಮೂಡಿಸಿದ ಬಿಎಸ್‌ವೈ ಆಪ್ತನ ನಡೆ