ಕೊರೋನಾದಿಂದ ಕಾಪಾಡಿಕೊಳ್ಳಲು ಮಂಗಳೂರು ಪೊಲೀಸ್‌ ಠಾಣೆಯಲ್ಲಿ ವಿಭಿನ್ನ ಕ್ರಮ!

ಏರುತ್ತಿರುವ ಕೊರೋನಾ ಪ್ರಕರಣಗಳ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಹೀಗಿರುವಾಗ ಜನರು ಈ ನಿಯಮಗಳನ್ನು ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರನ್ನು ನೇಮಕ ಮಾಡಲಾಗಿದೆ. ಆದರೆ ಜನರ ಸುರಕ್ಷತೆ ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೊಲೀಸರು ತಮ್ಮ ರಕ್ಷಣೆಯನ್ನೂ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಮಂಗಳೂರು ಠಾಣೆಯಲ್ಲಿ ಪೊಲೀಸರ ಸುರಕ್ಷತೆಗಾಗಿ ವಿಭಿನ್ನ ಪ್ರಯೋಗವೊಂದನ್ನು ಆರಂಭಿಸಲಾಗಿದೆ.

First Published May 6, 2021, 3:16 PM IST | Last Updated May 6, 2021, 3:17 PM IST

ಮಂಗಳೂರು(ಮೇ.06): ಏರುತ್ತಿರುವ ಕೊರೋನಾ ಪ್ರಕರಣಗಳ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ. ಹೀಗಿರುವಾಗ ಜನರು ಈ ನಿಯಮಗಳನ್ನು ಪಾಲಿಸುತ್ತಿದ್ದಾರೋ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರನ್ನು ನೇಮಕ ಮಾಡಲಾಗಿದೆ. ಆದರೆ ಜನರ ಸುರಕ್ಷತೆ ಕಾಪಾಡುವಲ್ಲಿ ಶ್ರಮಿಸುತ್ತಿರುವ ಪೊಲೀಸರು ತಮ್ಮ ರಕ್ಷಣೆಯನ್ನೂ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಿರುವಾಗ ಮಂಗಳೂರು ಠಾಣೆಯಲ್ಲಿ ಪೊಲೀಸರ ಸುರಕ್ಷತೆಗಾಗಿ ವಿಭಿನ್ನ ಪ್ರಯೋಗವೊಂದನ್ನು ಆರಂಭಿಸಲಾಗಿದೆ.

ಇಳಿಯದ ಕೊರೋನಾ ಅಬ್ಬರ, ಕರುನಾಡಲ್ಲಿ ಲಾಕ್‌ಡೌನ್‌ ಹೇರುವ ಸುಳಿವು!

ಹೌದು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಯಲ್ಲಿ ಕೋವಿಡ್‌ನಿಂದ ರಕ್ಷಣೆಗೆ ವಿಶೇಷ ಪ್ರಯತ್ನ ನಡೆಸಲಾಗಿದ್ದು, ಪೊಲೀಸ್ ಕಮಿಷನರ್ ಶಶಿಕುಮಾರ್ ಮಾರ್ಗದರ್ಶನದಂತೆ ಸ್ಟೀಮಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಬರ್ಕೆ ಸ್ಟೇಷನ್ ಆವರಣದಲ್ಲಿ ಸ್ಟೀಮಿಂಗ್ ಉಪಕರಣ ಅಳವಡಿಕೆ ಮಾಡಲಾಗಿದೆ.

ಇಲ್ಲಿ ಗ್ಯಾಸ್ ಮೂಲಕ ಕುಕ್ಕರ್​​ನಲ್ಲಿ ನೀರಿಗೆ ತುಳಸಿ, ಲವಂಗ ಹಾಕಿ ಕುದಿಸಲಾಗುತ್ತದೆ. ಕುಕ್ಕರ್​ನಲ್ಲಿ ನೀರು ಕುದಿದ ಬಳಿಕ ಬರುವ ಹಬೆಯನ್ನು ಪೈಪ್​ ಮೂಲಕ ಹಾದು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಪೈಪ್ ಮೂಲಕ ಬರುವ ಹಬೆಯಲ್ಲಿ ಪೊಲೀಸರಿಗೆ 5 ನಿಮಿಷಗಳ ಸ್ಟೀಮಿಂಗ್ ತೆಗೆದುಕೊಳ್ಳುವ ಸೌಲಭ್ಯವಿದೆ. ಬರ್ಕೆ ಠಾಣೆಯ ಪೊಲೀಸ್ ಸಿಬ್ಬಂದಿ ಠಾಣೆಗೆ ಹೊರಗಿನಿಂದ ಒಳಬರುವ ವೇಳೆ ಸ್ಟೀಮ್ ತೆಗೆದುಕೊಳ್ಳಬೇಕು. ಪೊಲೀಸ್ ಠಾಣೆಗೆ ದೂರು ನೀಡಲು ಬರುವವರಿಗೂ ಸ್ಟೀಮಿಂಗ್ ವ್ಯವಸ್ಥೆ ಇದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories