ಇಳಿಯದ ಕೊರೋನಾ ಅಬ್ಬರ, ಕರುನಾಡಲ್ಲಿ ಲಾಕ್‌ಡೌನ್‌ ಹೇರುವ ಸುಳಿವು!

ರಾಜ್ಯದಲ್ಲಿ ಮಹಾಮಾರಿ ಅಬ್ಬರ ದಿನವೂ ಹೆಚ್ಚಾಗುತ್ತಲೇ ಇದೆ.  ಜನತಾ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ. ನಾವು ನಿರೀಕ್ಷೆ ಮಾಡಿದಷ್ಟು ಪ್ರಯೋಜನ ಜನತಾ ಲಾಕ್ ಡೌನ್ ನಿಂದ ಆಗಿಲ್ಲ ಎಂದು   ಆರೋಗ್ಯ ಸಚಿವ ಡಾ.ಕೆ ಸುಧಾಕರ ಹೇಳಿದ್ದಾರೆ

Share this Video
  • FB
  • Linkdin
  • Whatsapp

ಬೆಂಗಳೂರು (ಮೇ.06): ರಾಜ್ಯದಲ್ಲಿ ಮಹಾಮಾರಿ ಅಬ್ಬರ ದಿನವೂ ಹೆಚ್ಚಾಗುತ್ತಲೇ ಇದೆ. ಜನತಾ ಲಾಕ್ ಡೌನ್ ಸಂಪೂರ್ಣ ವಿಫಲವಾಗಿದೆ. ನಾವು ನಿರೀಕ್ಷೆ ಮಾಡಿದಷ್ಟು ಪ್ರಯೋಜನ ಜನತಾ ಲಾಕ್ ಡೌನ್ ನಿಂದ ಆಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ ಹೇಳಿದರು. 

ಬೆಂಗಳೂರಲ್ಲಿ 15 ದಿನ ಲಾಕ್‌ಡೌನ್‌ ಮಾಡಿದರೂ ಕೋವಿಡ್‌ ಪ್ರಕರಣ ಭಾರೀ ಹೆಚ್ಚಳ!

ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಸುಧಾಕರ್ ಜನತಾ ಲಾಕ್ ಡೌನ್ ಹೇಗಿದೆ ಎಂದು ನೀವೇ ನೋಡಿದ್ದೀರಾ. ಜನರೇ ಇದನ್ನ ಅರ್ಥ ಮಾಡಿಕೊಳ್ಳಬೇಕು. ಜನರು ಸಹಕಾರ ಅಗತ್ಯವಾಗಿ ನೀಡಬೇಕು. ಇಲ್ಲದೆ ಹೋದರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಚೈನ್ ಲಿಂಕ್ ಕಟ್ ಆಗಲಿ ಕನಿಷ್ಠ 14 ದಿನ ಬೇಕು. ಈಗ 7-8 ದಿನ ಆಗಿದೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Related Video