ಚಿತ್ರದುರ್ಗದಲ್ಲಿ ರಾಜ್ಯ ಬುಡಕಟ್ಟು ಉತ್ಸವ, ಕಲಾ ತಂಡಗಳಿಂದ ಕಣ್ಮನ ಸೆಳೆಯುವ ಪ್ರದರ್ಶನ

ಬುಡಕಟ್ಟು ಸಂಸ್ಕೃತಿ ತವರೂರು ಚಿತ್ರದುರ್ಗದಲ್ಲಿ,  ರಾಜ್ಯ ಮಟ್ಟದ ಬುಡಕಟ್ಟು ಉತ್ಸವ ಅದ್ದೂರಿಯಾಗಿ ನಡೆದಿದೆ. ಈ ಸಂಭ್ರಮದ ಉತ್ಸವಕ್ಕೆ ರಾಜ್ಯ ಸಾರಿಗೆ & ಪರಿಶಿಷ್ಟ ವರ್ಗದ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅದ್ದೂರಿ ಚಾಲನೆ ನೀಡಿದರು.

First Published Nov 17, 2021, 4:27 PM IST | Last Updated Nov 17, 2021, 4:27 PM IST

ಚಿತ್ರದುರ್ಗ (ನ. 17): ಬುಡಕಟ್ಟು ಸಂಸ್ಕೃತಿ ತವರೂರು ಚಿತ್ರದುರ್ಗದಲ್ಲಿ,  ರಾಜ್ಯ ಮಟ್ಟದ ಬುಡಕಟ್ಟು ಉತ್ಸವ ಅದ್ದೂರಿಯಾಗಿ ನಡೆದಿದೆ. ಈ ಸಂಭ್ರಮದ ಉತ್ಸವಕ್ಕೆ ರಾಜ್ಯ ಸಾರಿಗೆ & ಪರಿಶಿಷ್ಟ ವರ್ಗದ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅದ್ದೂರಿ ಚಾಲನೆ ನೀಡಿದರು.

ಇಲ್ಲಿ ಬುಡಕಟ್ಟು ಸಮುದಾಯದ ಸಮಗ್ರ ಚಿತ್ರಣವನ್ನು ಈ ಉತ್ಸವ ಕಟ್ಟಿಕೊಟ್ಟಿದೆ. ವಿಶೇಷವಾಗಿ ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ‌ ಛಾಯಾಚಿತ್ರಗಳನ್ನು ಜಿಲ್ಲೆಯ ಹೆಮ್ಮೆಯ ಫೋಟೋಗ್ರಾಫರ್ ನಿಸರ್ಗ ಗೋವಿಂದರಾಜು ತಮ್ಮ ಕೈ ಚಳಕದ ಛಾಯಾಚಿತ್ರಗಳನ್ನು ಪ್ರದರ್ಶನ ಮಾಡಿದ್ದಾರೆ.  ಬುಡಕಟ್ಟು ಜನರ ಸಾಂಸ್ಕೃತಿಕ ಕಲೆಗೆ ಕೋಟೆನಾಡು ದುರ್ಗ ಸಾಕ್ಷಿಯಾಗಿದೆ, ಹತ್ತಾರು ಕಲಾ ತಂಡಗಳ ಪ್ರದರ್ಶನ ಅತ್ಯಂತ ಕಣ್ಮನ ಸೆಳೆಯುವಂತಿತ್ತು.