ನಿಮ್ಮ ರಾಜಕೀಯ ಕಾರ್ಯಕ್ರಮಕ್ಕೆ ಇಲ್ಲದ ರೂಲ್ಸ್ ಗಣೇಶ ಹಬ್ಬಕ್ಕೆ ಯಾಕೆ?

* ಗಣೇಶ ಹಬ್ಬ ಆಚರಣೆಗೆ ನಿಯಮ ಹಾಕಿ ನಿರ್ಬಂಧ ಬೇಡ
* ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯ
* ಅವಕಾಶ ನೀಡದಿದ್ದರೆ ಎಲ್ಲ ಮುಖಂಡರ ಮನೆ ಮುಂದೆ ಧರಣಿ
* ರಾಜಕೀಯ ಕಾರ್ಯಕ್ರಮಕ್ಕೆ ಇಲ್ಲದ ನಿಯಮ ಗಣೇಶ ಹಬ್ಬಕ್ಕೆ ಯಾಕೆ? 

Share this Video
  • FB
  • Linkdin
  • Whatsapp

ಧಾರವಾಡ(ಆ. 30) ಗಣೇಶ ಹಬ್ಬ ಆಚರಣೆ ಸಂಬಂಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಹಬ್ಬ ಆಚರಣೆಗೆ ಯಾವ ನಿಯಮ ಹಾಕಬೇಕು ಎನ್ನುವುದರ ಕುರಿತು ಸರ್ಕಾರದ ಮಟ್ಟದಲ್ಲಿ ಸಭೆ ನಡೆಯುತ್ತಿದೆ. ನಿಯಮಗಳನ್ನು ಹಾಕಿ ಆದರೆ ನಿರ್ಬಂಧ ಬೇಡ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಯಾವುದೇ ಕೊರೋನಾ ಕೇಸಿಲ್ಲ

ಹತ್ತು ದಿನದಲ್ಲಿ ಏನು ಮಾಡಲು ಸಾಧ್ಯವಿದೆ? ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆ ಮಾಡುವ ನಿರ್ಧಾರವನ್ನು ನಾವು ಮಾಡಿದ್ದೇವೆ ಎಂದು ಮುತಾಲಿಕ್ ಹೇಳಿದ್ದಾರೆ. ಸರ್ಕಾರ ಶೀಘ್ರವಾಗಿ ಕ್ರಮ ತೆಗೆದುಕೊಳ್ಳದಿದ್ದರೆ ಎಲ್ಲ ಮುಖಂಡರ ಮನೆ ಮುಂದೆ ಧರಣಿ ಮಾಡುತ್ತೇವೆ. ನಿಮ್ಮ ರಾಜಕಾರಣದ ಕಾರ್ಯಕ್ರಮಕ್ಕೆ ಇಲ್ಲದ ನಿಯಮ ಗಣೇಶ ಹಬ್ಬಕ್ಕೆ ಯಾಕೆ ? ಎಂದು ಪ್ರಶ್ನೆ ಮಾಡಿದ್ದಾರೆ. 

Related Video