ರಾಜ್ಯದಲ್ಲಿ ಇಳಿಯುತ್ತಿದೆ ಕೊರೋನಾ : 4 ಜಿಲ್ಲೆಯಲ್ಲಿ ಕೇಸಿಲ್ಲ

  •   ರಾಜ್ಯದ 21 ಜಿಲ್ಲೆಗಳಲ್ಲಿ ಕೋವಿಡ್‌ಗೆ ಶೂನ್ಯ ಸಾವು
  •  ಬೀದರ್‌, ಚಿಕ್ಕಬಳ್ಳಾಪುರ, ಗದಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ನ ಹೊಸ ಪ್ರಕರಣ ಪತ್ತೆಯಾಗಿಲ್ಲ. 
Zero covid Case  reports in 21 Districts of Karnataka on august 29 snr

  ಬೆಂಗಳೂರು (ಆ.30): ರಾಜ್ಯದಲ್ಲಿ ಭಾನುವಾರ 1,262 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ. 17 ಮಂದಿ ಮೃತರಾಗಿದ್ದಾರೆ. 1,384 ಮಂದಿ ಗುಣಮುಖರಾಗಿದ್ದಾರೆ. 

ಗುಣಮುಖರ ಸಂಖ್ಯೆ ಹೆಚ್ಚಳದ ಕಾರಣ ಸಕ್ರಿಯ ಸೋಂಕಿತರ ಸಂಖ್ಯೆ 18,758ಕ್ಕೆ ಇಳಿದಿದೆ. ಬೀದರ್‌, ಚಿಕ್ಕಬಳ್ಳಾಪುರ, ಗದಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್‌ನ ಹೊಸ ಪ್ರಕರಣ ಪತ್ತೆಯಾಗಿಲ್ಲ. 

ಉಳಿದಂತೆ ಐದು ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಐದು ಜಿಲ್ಲೆಯಲ್ಲಿ ಹತ್ತರೊಳಗೆ ಪ್ರಕರಣಗಳಿವೆ. ಉಳಿದಂತೆ ಬೆಂಗಳೂರು ನಗರದಲ್ಲಿ 361, ದಕ್ಷಿಣ ಕನ್ನಡ 202, ಉಡುಪಿ 96, ಮೈಸೂರು ಮತ್ತು ಕೊಡಗು ತಲಾ 86, ಹಾಸನ 72, ಶಿವಮೊಗ್ಗ ಜಿಲ್ಲೆಯಲ್ಲಿ 59 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ 6, ದಕ್ಷಿಣ ಕನ್ನಡದಲ್ಲಿ 3, ಹಾಸನ 2, ಉತ್ತರ ಕನ್ನಡ, ರಾಮನಗರ, ಕೊಡಗು, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ. 21 ಜಿಲ್ಲೆಯಲ್ಲಿ ಕೋವಿಡ್‌ನಿಂದ ಯಾರೂ ಮೃತ ಪಟ್ಟಿಲ್ಲ.

ಕರ್ನಾಟಕದಲ್ಲಿ ಕೊಂಚ ಕೊರೋನಾ ಇಳಿಕೆ: ಇಲ್ಲಿದೆ ಆ.28ರ ಅಂಕಿ-ಸಂಖ್ಯೆ

ಭಾನುವಾರದ 1.78 ಲಕ್ಷ ಪರೀಕ್ಷೆ ಸೇರಿದಂತೆ ಒಟ್ಟು 4.31 ಕೋಟಿ ಕೋವಿಡ್‌ ಪರೀಕ್ಷೆ ರಾಜ್ಯದಲ್ಲಿ ಈವರೆಗೆ ನಡೆದಿದೆ. ರಾಜ್ಯದಲ್ಲಿ ಈವರೆಗೆ 29.47 ಲಕ್ಷ ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು 28.91 ಲಕ್ಷ ಮಂದಿಯಲ್ಲಿ ಗುಣ ಹೊಂದಿದ್ದಾರೆ. ಸದ್ಯ 18,758 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 37,278 ಮಂದಿ ಮೃತಪಟ್ಟಿದ್ದಾರೆ.

ಒಂದೇ ದಿನ 2.16 ಲಕ್ಷ ಮಂದಿಗೆ ಲಸಿಕೆ

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 2.16 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 1.44 ಲಕ್ಷ ಮಂದಿ ಮೊದಲ ಡೋಸ್‌ ಪಡೆದಿದ್ದು 71,711 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ಈ ಪೈಕಿ ಯಾರಲ್ಲಿಯೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿರುವುದು ವರದಿಯಾಗಿಲ್ಲ.

ಆರೋಗ್ಯ ಕಾರ್ಯಕರ್ತರು 9, ಮುಂಚೂಣಿ ಕಾರ್ಯಕರ್ತರು 12, 18-44 ವರ್ಷದೊಳಗಿನ 1.09 ಲಕ್ಷ ಮಂದಿ, 45 ವರ್ಷ ಮೇಲ್ಪಟ್ಟ35,339 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಆರೋಗ್ಯ ಕಾರ್ಯಕರ್ತರು 653, ಮುಂಚೂಣಿ ಕಾರ್ಯಕರ್ತರು 2846, 18-44 ವರ್ಷದೊಳಗಿನ 42,064 ಮಂದಿ, 45 ವರ್ಷ ಮೇಲ್ಪಟ್ಟ26,148 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

Latest Videos
Follow Us:
Download App:
  • android
  • ios