ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು: ಶೃಂಗೇರಿಯಲ್ಲಿ ಬೊಮ್ಮಾಯಿಗೆ ಸ್ವಾಗತಿಸಿದ ಪರಿ

ಸಿಎಂ ಆದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಆದ್ರೆ, ಶೃಂಗೇರಿಯಲ್ಲಿ ಸಿಎಂಗೆ ಸ್ವಾಗತ ಕೋರುತ್ತಿರುವ ನೆಪದಲ್ಲಿ ಅಣಕ ಮಾಡುತ್ತಿರುವ ಬ್ಯಾನರ್ ಹಾಕಲಾಗಿದೆ.

First Published Apr 19, 2022, 2:43 PM IST | Last Updated Apr 19, 2022, 2:43 PM IST

ಚಿಕ್ಕಮಗಳೂರು, (ಏ.19): ಸಿಎಂ ಆದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿಗೆ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಆದ್ರೆ, ಶೃಂಗೇರಿಯಲ್ಲಿ ಸಿಎಂಗೆ ಸ್ವಾಗತ ಕೋರುತ್ತಿರುವ ನೆಪದಲ್ಲಿ ಅಣಕ ಮಾಡುತ್ತಿರುವ ಬ್ಯಾನರ್ ಹಾಕಲಾಗಿದೆ.

 ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ಆಗ್ರಹಿಸಿ ಸ್ವಯಂಪ್ರೇರಿತ ಬಂದ್
 
ಹೌದು... ದಯವಿಟ್ಟು ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು ಬ್ಯಾನರ್ ಹಾಕುವ ಮೂಲಕ ಸಿಎಂ ಬೊಮ್ಮಾಯಿಗೆ ಟಾಂಗ್ ಕೊಡುವ ಪ್ರಯತ್ನ ಇದಾಗಿದೆ. ಯಾಕಂದ್ರೆ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಈ ಹಿನ್ನೆಲೆಯಲ್ಲಿ ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆಗಾಗಿ 15 ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಆದ್ರೆ, ಸರ್ಕಾರ ಪದೇಪದೇ ಭರವಸೆ ನೀಡಿ ಮಾತು ತಪ್ಪುತ್ತಿದೆ. ಸರ್ಕಾರ, ಜಿಲ್ಲಾಡಳಿತದ ಧೋರಣೆಯಿಂದ ರೋಸಿಹೋಗಿರುವ ಸಾರ್ವಜನಿಕರು, ಶೃಂಗೇರಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿಗೆ  ಹಲವೆಡೆ ಅಣಕವಾಡುತ್ತಿರುವ ಬ್ಯಾನರ್ ಹಾಕಿ ತಿವಿದಿದ್ದಾರೆ.